ಬೆಂಗಳೂರು: ನಗರದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಅವಕಾಶವನ್ನು ನೀಡುವ ಉದ್ದೇಶದಿಂದ ಯಲಹಂಕದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವು ಜಾಗತಿಕ ಶಿಕ್ಷಣ ಮೇಳವನ್ನು ಹಮ್ಮಿಕೊಂಡಿತ್ತು.
ಅಂತರರಾಷ್ಟ್ರೀಯ ಮೆಚ್ಚುಗೆ ಪಡೆದಿರುವ 14 ದೇಶಗಳ 60ಕ್ಕೂ ಅಧಿಕ ವಿಶ್ವವಿದ್ಯಾಲಯಗಳು ಈ ಮೇಳದಲ್ಲಿ ಭಾಗವಹಿಸಿದ್ದರು. ಯುಸಿಎಲ್, ಕಿಂಗ್ಸ್ ಕಾಲೇಜು ಲಂಡನ್, ಆಕ್ಲೆಂಡ್ ವಿಶ್ವವಿದ್ಯಾಲಯ, ಮ್ಯಾಕ್ವಾರಿ ವಿಶ್ವವಿದ್ಯಾಲಯ, ಯುಸಿ ಡೇವಿಸ್ ಮತ್ತು ಇಂಡಿಯಾನಾದಂಥ ಉನ್ನತ ವಿಶ್ವವಿದ್ಯಾಲಯಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ವಿದೇಶಗಳಲ್ಲಿ ಪದವಿ. ಸ್ನಾತಕೋತ್ತರ ಪದವಿ, ಪಿಎಚ್.ಡಿ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಜಾಗತಿಕ ಶಿಕ್ಷಣ ಮೇಳದಲ್ಲಿ ಭಾಗವಹಿಸಿದ್ದರು. ವಿದೇಶಕ್ಕೆ ಏಜೆಂಟರ ಮೂಲಕ ತೆರಳದೇ ಪ್ರತಿಷ್ಠಿತ ಜಾಗತಿಕ ಶಿಕ್ಷಣ ಸಂಸ್ಥೆಗಳೊಂದಿಗೆ ನೇರವಾಗಿ ಸಂವಹನ ನಡೆಸಲು ಮೇಳ ವೇದಿಕೆಯಾಯಿತು.
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ವಿಜಯನ್ ಇಮ್ಯಾನುಯೆಲ್, ಸಹ ಕುಲಪತಿ ಶಿವ ಪೆರುಮಾಳ್ ಮತ್ತು ಕುಲಸಚಿವರಾದ ಸಮೀನಾ ನೂರ್ ಅಹ್ಮದ್ ಪನಾಲಿ ಅವರು ಈ ಮೆಗಾ ಮೇಳವನ್ನು ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.