ADVERTISEMENT

ಬೆಂಗಳೂರು ನಗರದ 21 ವಿದ್ಯಾರ್ಥಿಗಳು ಜಪಾನ್ ಪ್ರವಾಸಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2025, 16:13 IST
Last Updated 29 ಏಪ್ರಿಲ್ 2025, 16:13 IST
ಕಲಿಕಾ ಪ್ರವಾಸಕ್ಕೆ ಜಪಾನ್‌ಗೆ ತೆರಳಲು ಆಯ್ಕೆಯಾದ ವಿದ್ಯಾರ್ಥಿಗಳು
ಕಲಿಕಾ ಪ್ರವಾಸಕ್ಕೆ ಜಪಾನ್‌ಗೆ ತೆರಳಲು ಆಯ್ಕೆಯಾದ ವಿದ್ಯಾರ್ಥಿಗಳು   

ಬೆಂಗಳೂರು: ಮಕ್ಕಳಲ್ಲಿ ಜಾಗತಿಕ ಮಟ್ಟದ ಉದ್ಯಮದ ಮನೋಭಾವ ಮೂಡಿಸಲು ‘ಲರ್ನ್ ಎನ್ ಇನ್ಸ್ಪೈರ್’ ಹಾಗೂ ನಿಶ್ಚಲ್ಸ್ ಸ್ಮಾರ್ಟ್ ಲರ್ನಿಂಗ್ ಸಲ್ಯೂಷನ್ಸ್ ಸಹಯೋಗದಲ್ಲಿ 'ಸ್ಪಾರ್ ಎಕ್ಸ್' ಯೋಜನೆ ಮೂಲಕ ಬೆಂಗಳೂರಿನ ಆರು ಶಾಲೆಗಳ 21 ವಿದ್ಯಾರ್ಥಿಗಳು ಸೇರಿದಂತೆ ದೇಶದ ಒಟ್ಟು ಒಂಬತ್ತು ಶಾಲೆಗಳ 32 ವಿದ್ಯಾರ್ಥಿಗಳು ಜಪಾನ್‌ಗೆ ಕಲಿಕಾ ಪ್ರವಾಸ ಕೈಗೊಳ್ಳಲಿದ್ದಾರೆ.

ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆ, ಅಪೋಲೊ ನ್ಯಾಷನಲ್ ಪಬ್ಲಿಕ್ ಶಾಲೆ, ಅಂಬರ್ ವ್ಯಾಲಿ ರೆಸಿಡೆನ್ಸಿಯಲ್ ಶಾಲೆ, ಶಾರದಾ ವಿದ್ಯಾನಿಕೇತನ್, ಡಿಪಿಎಸ್, ಸರ್ವಪಲ್ಲಿ ವಿದ್ಯಾ ನಿಲಯಂ ಪ್ರೌಢಶಾಲೆಯ 21 ವಿದ್ಯಾರ್ಥಿಗಳು ಈ ಪ್ರವಾಸದಲ್ಲಿ ಉದ್ಯಮಶೀಲತೆಯ ಮೊದಲ ಹಂತದ ಕಲಿಕೆಗೆ ಆಯ್ಕೆಯಾಗಿದ್ದಾರೆ. ಐದು ದಿನಗಳ ಈ ಕಲಿಕಾ ಪ್ರವಾಸವು ಸಾಂಸ್ಕೃತಿಕ ಕಲಿಕೆ, ಜಪಾನಿನ ನವೊದ್ಯಮಗಳ ಜತೆ ಚರ್ಚೆ, ಕ್ಯೋಟೋ ಹಾಗೂ ಒಸಾಕಾದಲ್ಲಿರುವ ಪಾರಂಪರಿಕ ಸ್ಥಳಗಳಿಗೆ ಭೇಟಿಯನ್ನು ಒಳಗೊಂಡಿದೆ.

‘ನಾನು ಮುನ್ನಡೆಸುತ್ತಿರುವ ಶಾಲೆಗಳ ಮಕ್ಕಳು ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಮಕ್ಕಳಲ್ಲಿ ಆತ್ಮವಿಶ್ವಾಸ, ಸಾಂಸ್ಕೃತಿಕ ಅರಿವು, ಅಂತರರಾಷ್ಟ್ರೀಯ ಮಟ್ಟದ ವೇದಿಕೆ ಎದುರಿಸಲು ತಯಾರಿ ಮಾಡುವ ನಮ್ಮ ಬದ್ಧತೆಗೆ ಇದು ಸಾಕ್ಷಿಯಾಗಿದೆ’ ಎಂದು ಐಶ್ವರ್ಯ ಡಿಕೆಎಸ್ ಹೆಗಡೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.