ADVERTISEMENT

ಬಿಟ್ ಕಾಯಿನ್ ಹೂಡಿಕೆ: ₹ 2.60 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2023, 16:27 IST
Last Updated 10 ಡಿಸೆಂಬರ್ 2023, 16:27 IST
<div class="paragraphs"><p>ಬಿಟ್ ಕಾಯಿನ್</p></div>

ಬಿಟ್ ಕಾಯಿನ್

   

ರಾಯಿಟರ್ಸ್ ಚಿತ್ರ

ಬೆಂಗಳೂರು: ಬಿಟ್ ಕಾಯಿನ್ ಹೂಡಿಕೆ ಹೆಸರಿನಲ್ಲಿ ನಗರದ ಯುವತಿಯೊಬ್ಬರಿಂದ ₹ 2.60 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

‘ನಗರದ ಕಂಪನಿಯೊಂದರ ಉದ್ಯೋಗಿ ಆಗಿರುವ 28 ವರ್ಷದ ಯುವತಿ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಕೃತ್ಯ ಎಸಗಿರುವ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನಾನು ಬಿಟ್‌ ಕಾಯಿನ್ ಹೂಡಿಕೆ ಮಾಡಿ ಮೂರು ಪಟ್ಟು ಹೆಚ್ಚು ಹಣ ಗಳಿಸಿದ್ದೇನೆ’ ಎಂಬುದಾಗಿ ಇನ್‌ಸ್ಟಾಗ್ರಾಂನಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಪ್ರಕಟಿಸಿದ್ದರು. ಅದನ್ನು ನೋಡಿದ್ದ ಯುವತಿ, ಹೂಡಿಕೆ ಬಗ್ಗೆ ವಿಚಾರಿಸಿದ್ದರು. ಹೂಡಿಕೆ ಬಗ್ಗೆ ಮಾಹಿತಿ ನೀಡಿದ್ದ ಆರೋಪಿ, ಕೆಲ ಬ್ಯಾಂಕ್‌ ಖಾತೆಗಳ ವಿವರ ನೀಡಿದ್ದರು. ಅದೇ ಖಾತೆಗಳಿಗೆ ಯುವತಿ ಹಂತ ಹಂತವಾಗಿ ₹ 2.60 ಲಕ್ಷ ಪಾವತಿಸಿದ್ದರು.’

‘ನಿಗದಿತ ದಿನಗಳ ನಂತರ ಯಾವುದೇ ಹಣ ವಾಪಸು ಬಂದಿರಲಿಲ್ಲ. ಆರೋಪಿ ಸಹ ತಲೆಮರೆಸಿಕೊಂಡಿದ್ದಾನೆ. ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದು ವಂಚನೆ ಮಾಡಿರುವ ಅನುಮಾನವಿದೆ’ ಎಂದು ಪೊಲೀಸರು ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.