
ಪ್ರಜಾವಾಣಿ ವಾರ್ತೆ
ಬಂಧನ
ಬೆಂಗಳೂರು: ಕಮಲ ಮುನಿಯಪ್ಪ ಎಜುಕೇಷನಲ್ ಟ್ರಸ್ಟ್‌ನ ಎಡಿಫೈ ಶಾಲೆಗೆ ಸೇರಿದ್ದ ₹4 ಕೋಟಿ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಲೆಕ್ಕಾಧಿಕಾರಿ ಸೇರಿದಂತೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಿಕ್ಷಣ ಸಂಸ್ಥೆಯ ಕೆ.ಎಂ.ಅಶೋಕ್ ಕುಮಾರ್ ಅವರು ದೂರು ನೀಡಿದ್ದರು. ಶಾಲೆಯ ಲೆಕ್ಕಾಧಿಕಾರಿ ಸಾಗರ್ ಮತ್ತು ಶಾಲಾ ಬಸ್ ನಿರ್ವಹಣೆ ಮಾಡುತ್ತಿದ್ದ ಮನೋಜ್ ಎಂಬುವರನ್ನು ಬಂಧಿಸ ಲಾಗಿದೆ ಎಂದು ಮೂಲಗಳು ಹೇಳಿವೆ. 2017ರಿಂದ ಇದುವರೆಗೂ ₹4 ಕೋಟಿಯನ್ನು ವಂಚಿಸಿದ್ದಾರೆ. ಮುರುಳಿ, ಕಿಶೋರ್, ಸಿ.ಮೋಹನ್ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಶಾಲಾ ಶುಲ್ಕದ ಹಣವನ್ನು ಸ್ವಂತಕ್ಕೆ ಬಳಸಿದ್ದುದು ತನಿಖೆಯಿಂದ ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ.