ADVERTISEMENT

ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ: ಶಾಸಕ ಭರವಸೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 20:06 IST
Last Updated 24 ಜನವರಿ 2018, 20:06 IST
ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ ಕಾರ್ಯಕ್ರಮದಲ್ಲಿ ಮಾತನಾಡಿದರು. ಖಜಾಂಚಿ ಹನುಮಂತರಾಜು, ಪ್ರಧಾನ ಕಾರ್ಯದರ್ಶಿ ಎಸ್.ಚಂದ್ರಶೇಖರ್, ಬನಶಂಕರಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ್, ಸಂಘದ ನಿರ್ದೇಶಕ ಆರ್.ಪಿ.ಪ್ರಕಾಶ್, ಕೆಪಿಸಿಸಿ ವೈದ್ಯ ಘಟಕದ ಅಧ್ಯಕ್ಷ ಡಾ. ಹರೀಶ್ ಇದ್ದಾರೆ
ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ ಕಾರ್ಯಕ್ರಮದಲ್ಲಿ ಮಾತನಾಡಿದರು. ಖಜಾಂಚಿ ಹನುಮಂತರಾಜು, ಪ್ರಧಾನ ಕಾರ್ಯದರ್ಶಿ ಎಸ್.ಚಂದ್ರಶೇಖರ್, ಬನಶಂಕರಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ್, ಸಂಘದ ನಿರ್ದೇಶಕ ಆರ್.ಪಿ.ಪ್ರಕಾಶ್, ಕೆಪಿಸಿಸಿ ವೈದ್ಯ ಘಟಕದ ಅಧ್ಯಕ್ಷ ಡಾ. ಹರೀಶ್ ಇದ್ದಾರೆ   

ಬೆಂಗಳೂರು: ‘ಆರ್ಯ ಈಡಿಗ ಜನಾಂಗದ ಸಮುದಾಯ ಭವನ ನಿರ್ಮಾಣಕ್ಕೆ ರಾಜರಾಜೇಶ್ವರಿ ನಗರದಲ್ಲಿ ಉಚಿತವಾಗಿ ನಿವೇಶನ ಕಲ್ಪಿಸುತ್ತೇವೆ’ ಎಂದು ಶಾಸಕ ಮುನಿರತ್ನ ಭರವಸೆ ನೀಡಿದರು.

ರಾಜರಾಜೇಶ್ವರಿ ನಗರದಲ್ಲಿ ಆಯೋಜಿಸಿದ್ದ ಬೆಂಗಳೂರು ದಕ್ಷಿಣ ತಾಲ್ಲೂಕು ಆರ್ಯ ಈಡಿಗರ ಸಂಘದ ಉದ್ಘಾಟನೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯಲ್ಲಿ ಅವರು ಮಾತನಾಡಿದರು.

ರಾಜರಾಜೇಶ್ವರಿ ನಗರದಲ್ಲಿ ಸ್ಥಾಪಿಸಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ಮುಂಬರುವ ಶಿವರಾತ್ರಿ ಹಬ್ಬದಂದು ಲೋಕಾರ್ಪಣೆ ಮಾಡಲಾಗುತ್ತದೆ ಎಂದರು.

ADVERTISEMENT

ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ರಾಜ್‍ಕುಮಾರ್, ‘ಜನಾಂಗದವರು ಮತ್ತಷ್ಟು ಸಂಘಟಿತರಾಗಬೇಕು. ರಾಜಕೀಯ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕು’ ಎಂದು ಹೇಳಿದರು.

ನಾರಾಯಣಗುರು, ಎಸ್.ಬಂಗಾರಪ್ಪ, ಡಾ. ರಾಜ್‍ಕುಮಾರ್, ಜೆ.ಪಿ.ನಾರಾಯಣಸ್ವಾಮಿ, ಎಂ.ತಿಮ್ಮೇಗೌಡ, ನೆಟ್ಟಕಲ್ಲಪ್ಪ ಸೇರಿದಂತೆ ಹಲವರು ಸಮುದಾಯದ ಏಳಿಗೆಗೆ ದುಡಿದಿದ್ದಾರೆ. ಅವರ ಹಾದಿಯಲ್ಲಿ ಯುವ ಪೀಳಿಗೆ ಮುಂದುವರಿಯಬೇಕು ಎಂದರು.

ರಾಜ್ಯ ಈಡಿಗ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ, ‘ಜಾತ್ಯತೀತ ಪಕ್ಷದಿಂದ ಮಾತ್ರ ಹಿಂದುಳಿದ ಜನಾಂಗದವರು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಉದ್ಯಮ ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.