ADVERTISEMENT

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ 656 ಮಂದಿ

​ಪ್ರಜಾವಾಣಿ ವಾರ್ತೆ
Published 23 ಮೇ 2020, 19:27 IST
Last Updated 23 ಮೇ 2020, 19:27 IST
ವಿದೇಶದಿಂದ ಬಂದಿರುವ ಪ್ರಯಾಣಿಕರು ತಪಾಸಣೆಗಾಗಿ ಕಾಯುತ್ತಿರುವುದು
ವಿದೇಶದಿಂದ ಬಂದಿರುವ ಪ್ರಯಾಣಿಕರು ತಪಾಸಣೆಗಾಗಿ ಕಾಯುತ್ತಿರುವುದು   

ದೇವನಹಳ್ಳಿ: ‘ಕಳೆದ 36 ಗಂಟೆಯಲ್ಲಿ ವಿವಿಧ ದೇಶಗಳಿಂದ ಒಟ್ಟು 656 ಪ್ರಯಾಣಿಕರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ಮಾಲ್ಡೀವ್ಸ್‌ನಮಾಲೆಯಿಂದ ಇಬ್ಬರು ಗರ್ಭಿಣಿಯರು, ಮಗು, 20 ಮಹಿಳೆಯರು, 132 ಪುರುಷರು ಸೇರಿದಂತೆ 152 ಪ್ರಯಾಣಿಕರು ಬಂದಿದ್ದು, ಇವರಲ್ಲಿ ಇಬ್ಬರಿಗೆ ಸೋಂಕು ಪತ್ತೆಯಾಗಿದೆ.

ದೋಹಾ, ಕೌಲಾಲಂಪುರದಿಂದ, ಜಕಾರ್ತದಿಂದ ಬಂದಿರುವ ಅನಿವಾಸಿ ಭಾರತೀಯರಲ್ಲಿ ಯಾರಿಗೂ ಸೋಂಕು ಕಂಡುಬಂದಿಲ್ಲ.

ADVERTISEMENT

ಸೋಂಕಿತರನ್ನು ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಉಳಿದವರನ್ನು ಬೆಂಗಳೂರು ನಗರ ಹಾಗೂ ಜನವಸತಿ ಪ್ರದೇಶದಿಂದ ದೂರವಿರುವ ರೆಸಾರ್ಟ್ ಮತ್ತು ಇತರೆ ಕಾಲೇಜುಗಳಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.