ADVERTISEMENT

ವೈದ್ಯಕೀಯ ವಿದ್ಯಾರ್ಥಿನಿ ಪುರಸಭೆ ಸದಸ್ಯೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 4:41 IST
Last Updated 31 ಡಿಸೆಂಬರ್ 2021, 4:41 IST
ಗಿರಿಷ್ಮಾ ಶ್ರೀಧರ್‌
ಗಿರಿಷ್ಮಾ ಶ್ರೀಧರ್‌   

‌ಆನೇಕಲ್‌: ತಾಲ್ಲೂಕಿನ ಜಿಗಣಿ ಪುರಸಭೆಯ ವಾರ್ಡ್‌ ನಂ. 6ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದ ಎಂಬಿಬಿಎಸ್‌ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡು ತ್ತಿರುವ 22 ವರ್ಷದ ಗಿರಿಷ್ಮಾ ಶ್ರೀಧರ್‌ ಗೆಲುವು ಸಾಧಿಸಿದ್ದಾರೆ.

ಬೆಂಗಳೂರಿನ ವೈಟ್‌ಪೀಲ್ಡ್‌ ಬಳಿ ಇರುವ ವೈದೇಹಿ ವೈದ್ಯಕೀಯ ಕಾಲೇಜಿನಲ್ಲಿ ಅವರು ಎಂಬಿಬಿಎಸ್‌ ಓದುತ್ತಿದ್ದಾರೆ. ಅವರ ತಂದೆ ಈ ಹಿಂದೆ ಗ್ರಾಮ ‍ಪಂಚಾಯಿತಿ ಸದಸ್ಯರಾಗಿದ್ದರು.

ಗಿರಿಷ್ಮಾ ಅವರು 302 ಮತ ಪಡೆದಿದ್ದು, ಪ್ರತಿಸ್ಪರ್ಧಿ ಬಿಜೆಪಿಯ ಕೃಷ್ಣಮ್ಮ ಮುನಿಕೃಷ್ಣಪ್ಪ 204 ಮತ ಪಡೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.