ADVERTISEMENT

ಜನರನ್ನು ಬೇರೆಡೆ ಸೆಳೆಯಲು ಮತಾಂತರ ನಿಷೇಧ ಮಸೂದೆ: ಎಎಪಿ ಆರೋಪ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 19:45 IST
Last Updated 22 ಡಿಸೆಂಬರ್ 2021, 19:45 IST

ಬೆಂಗಳೂರು: ‘ಜನರ ದೃಷ್ಟಿಯನ್ನು ನೈಜ ಸಮಸ್ಯೆಗಳಿಂದ ಬೇರೆಡೆ ಸೆಳೆಯಲು ರಾಜ್ಯ ಸರ್ಕಾರ ಮತಾಂತರ ನಿಷೇಧ ಮಸೂದೆಯನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿದೆ. ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿ,ಆಡಳಿತದಲ್ಲಿ ಸೋತಿರುವ ರಾಜ್ಯ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿ ಹಾಕಲು ಇಂತಹ ಕುತಂತ್ರ ಮಾಡುತ್ತಿದೆ’ ಎಂದುಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆರೋಪಿದರು.

‘ಸಂವಿಧಾನದ ಪ್ರಕಾರ ಒಬ್ಬ ಪ್ರಜೆಗೆ ತನ್ನಿಷ್ಟದ ಧರ್ಮ ಅನುಸರಿಸುವ ಹಕ್ಕಿದೆ. ಬಲವಂತದ ಮತಾಂತರ ತಡೆಯಲುದೇಶದಲ್ಲಿ ಈಗಾಗಲೇ ಕಾನೂನು ಇದೆ. ಅದನ್ನು ಜಾರಿ ಮಾಡಲು ಇಚ್ಛಾಶಕ್ತಿ ಇರಬೇಕು’ ಎಂದರು.

‘ಶೋಷಣೆ ಹಾಗೂ ಮತಾಂತರ ನಿಲ್ಲಿಸುವುದುಸರ್ಕಾರಕ್ಕೆ ಬೇಕಿಲ್ಲ. ಬದಲಿಗೆ ತಮ್ಮಿಷ್ಟದ ಧರ್ಮಕ್ಕೆ ಮತಾಂತರ ಆದವರನ್ನೂ ಶಿಕ್ಷಿಸಲು ಅಸ್ತ್ರವೊಂದು ಬೇಕಾಗಿದೆ ಅಷ್ಟೇ. ಧರ್ಮಗಳ ನಡುವೆ ಘರ್ಷಣೆ ಸೃಷ್ಟಿಸಲು ಸರ್ಕಾರ ಮುಂದಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಬೆಲೆ ಏರಿಕೆ, ರೈತರ ಸಮಸ್ಯೆ, ಸರ್ಕಾರಿ ಶಾಲೆಗಳ ಅವ್ಯವಸ್ಥೆ ಮತ್ತು ಖಾಸಗಿ ಶಾಲೆಗಳ ದರ್ಬಾರ್, ಸರ್ಕಾರಿ ಆಸ್ಪತ್ರೆಗಳ ಶೋಚನೀಯ ಸ್ಥಿತಿ ಮೊದಲಾದ ಗಂಭೀರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಸರ್ಕಾರಕ್ಕೆ ಆಸಕ್ತಿಯೇ ಇಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.