ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2023–24ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಗೌರವ ಪ್ರಶಸ್ತಿ’ಗೆ ಗಾಯಕರಾದ ಡಿ. ಕುಮಾರದಾಸ್ (ಬಳ್ಳಾರಿ) ಹಾಗೂ ಅಂಬಯ್ಯ ನುಲಿ (ರಾಯಚೂರು) ಅವರನ್ನು ಆಯ್ಕೆ ಮಾಡಲಾಗಿದೆ.
ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್ ಅವರು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ ಸೇರಿದಂತೆ ವಿವಿಧ ವಿಭಾಗಗಳಿಂದ 15 ಕಲಾವಿದರು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗೌರವ ಪ್ರಶಸ್ತಿಯು ತಲಾ ₹50 ಸಾವಿರ ಹಾಗೂ ವಾರ್ಷಿಕ ಪ್ರಶಸ್ತಿ ತಲಾ ₹25 ಸಾವಿರ ನಗದು ಬಹುಮಾನ ಹೊಂದಿದೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಶುಭಾ ಧನಂಜಯ್ ತಿಳಿಸಿದ್ದಾರೆ.
ಯಾರಿಗೆಲ್ಲ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ
ಕರ್ನಾಟಕ ಸಂಗೀತ
1. ಪದ್ಮಾ ಗುರುದತ್ ಬೆಂಗಳೂರು (ಗಾಯನ)
2. ರೇವತಿ ಕಾಮತ್ ಮೈಸೂರು (ವೀಣೆ)
3. ವಿ.ರಮೇಶ್ ಕೋಲಾರ (ನಾದಸ್ವರ)
4. ಕದ್ರಿ ರಮೇಶನಾಥ್ ಮಂಗಳೂರು (ಸ್ಯಾಕ್ಸೋಪೋನ್)
ಹಿಂದೂಸ್ತಾನಿ ಸಂಗೀತ
1. ವಿರೂಪಾಕ್ಷ ರೆಡ್ಡಿ ಓಣಿಮನಿ ಕೊಪ್ಪಳ (ಗಾಯನ)
2. ಶಫೀಖಾನ್ ಧಾರವಾಡ (ಸಿತಾರಾ)
3. ಸತೀಶ್ ಹಂಪಿಹೊಳಿ ಹುಬ್ಬಳ್ಳಿ (ತಬಲಾ)
ನೃತ್ಯ
1. ಸವಿತಾ ಅರುಣ ಬೆಂಗಳೂರು
2. ಮಾಲಾ ಶಶಿಕಾಂತ್ ಬೆಂಗಳೂರು
3. ಶರ್ಮಿಳಾ ಮುಖರ್ಜಿ ಬೆಂಗಳೂರು
4. ಸೈಯದ್ ಸಲ್ಲಾವುದ್ದೀನ್ ಪಾಶಾ ಆನೇಕಲ್
ಸುಗಮ ಸಂಗೀತ
1. ಆನಂದ ಮಾದಲಗೆರೆ ಬೆಂಗಳೂರು
ಕಥಾಕೀರ್ತನ
1. ಎಸ್.ಎಂ.ನಾಗರಾಜಾಚಾರ್ ಮಂಡ್ಯ
ಗಮಕ
1. ಜಿ.ಎಸ್.ನಾರಾಯಣ ಬೆಂಗಳೂರು
ಹೊರದೇಶ ಕನ್ನಡ ಕಲಾವಿದರು
1.ಕೆ.ಆರ್.ಎಸ್. ಪ್ರಸನ್ನ
ಅಮೆರಿಕ ಸಂಘ ಸಂಸ್ಥೆ
1. ಶ್ರೀವಾಣಿ ಸ್ಕೂಲ್ ಎಜುಕೇಶನ್ ಟ್ರಸ್ಟ್ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.