ADVERTISEMENT

ಎಇ, ಜೆಇ ಪರೀಕ್ಷೆಗೆ ಉಚಿತ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 21:31 IST
Last Updated 27 ನವೆಂಬರ್ 2020, 21:31 IST

ಬೆಂಗಳೂರು: ಧಾರವಾಡದ ಕ್ಲಾಸಿಕ್ ಸ್ಟಡಿ ಸರ್ಕಲ್ ಸಂಸ್ಥೆಯುಸಹಾಯಕ ಎಂಜಿನಿಯರ್‌ (ಎಇ) ಮತ್ತು ಕಿರಿಯ ಎಂಜಿನಿಯರ್ (ಜೆಇ) ಪರೀಕ್ಷೆ ಕುರಿತು ಉಚಿತ ಮಾಹಿತಿ ಕಾರ್ಯಾಗಾರ ಹಾಗೂ ಅಣಕು ಪರೀಕ್ಷೆಯನ್ನು ಭಾನುವಾರ (ನ.29) ಬೆಳಿಗ್ಗೆ 10 ಗಂಟೆಯಿಂದ ಸಪ್ತಾಪುರ ಭಾವಿ ಸರ್ಕಲ್‌ನಲ್ಲಿರುವ ತನ್ನ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದೆ.

‘ಪರೀಕ್ಷೆಗೆ ಮಹತ್ವದ ವಿಷಯಗಳನ್ನು ಹೇಗೆ ತಯಾರಿ ಮಾಡಿಕೊಳ್ಳಬೇಕೆಂದು ಪರಿಣಿತರಿಂದ ಉಪನ್ಯಾಸ ಹಾಗೂ ಸಾಧಕರಿಂದ ಮಾರ್ಗದರ್ಶನ ನೀಡಲಾಗುತ್ತದೆ. ಈ ಉಚಿತ ಕಾರ್ಯಾಗಾರವು 200 ಅಭ್ಯರ್ಥಿಗಳಿಗೆ ಮಾತ್ರ ಸೀಮಿತವಾಗಿರಲಿದೆ. ಹೆಸರು ನೋಂದಾಯಿಸಲು ಮೊ. 9980552080ಕ್ಕೆ ಸಂಪರ್ಕಿಸಿ’ ಎಂದು ಸಂಸ್ಥೆಯ ನಿರ್ದೇಶಕ ಲಕ್ಷ್ಮಣ್ ಎಸ್. ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT