ದಾಬಸ್ ಪೇಟೆ: ನರಸೀಪುರ ಪಂಚಾಯಿತಿ ವ್ಯಾಪ್ಅತಿಯ ಹೆಗ್ಗುಂದ ಬೆಟ್ಟದ ಬಂಡೆ ಮೇಲೆ (ಕೆರೆಪಾಳ್ಯ ಗ್ರಾಮದೆಡೆ) ನ.27ರಂದು ಕಾಣಿಸಿಕೊಂಡಿದ್ದ ಚಿರತೆ, ಅದೇ ಭಾಗದಲ್ಲಿ ಶನಿವಾರ ಮಧ್ಯಾಹ್ನ ಮತ್ತು ಸಂಜೆ ಕಾಣಿಸಿಕೊಂಡಿದೆ. ಜನರು ಭಯಗೊಂಡಿದ್ದಾರೆ.
ಬಂಡೆಯ ಮೇಲೆ ಮಲಗಿರುವ ಚಿರತೆಯ ಫೋಟೊವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಬೆಳಗಿನ ವೇಳೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆ, ರಾತ್ರಿ ಊರುಗಳಿಗೂ ಬರಬಹುದು ಎನ್ನುವ ಆತಂಕ ಗ್ರಾಮಸ್ಥರದ್ದು.
‘ಚಿರತೆ ಭೀತಿಯಿಂದ ಹೊಲಗಳಿಗೆ ಹೋಗಲೂ ಹೆದರುವಂತಾಗಿದೆ. ಚಿರತೆ ಇರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಬೋನು ಇಟ್ಟು ಸೆರೆ ಹಿಡಿಯಲು ಮುಂದಾಗಿಲ್ಲ’ ಎಂದು ಕೆರೆಪಾಳ್ಯದ ರಮೇಶ್ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.