ಬೆಂಗಳೂರು: ‘ಹೆಚ್ಚು ಸಮಯ ಡಿಜಿಟಲ್ ಸಾಧನಗಳ ಮುಂದೆ ಕಳೆಯುವುದರಿಂದ ಮಕ್ಕಳು ಯುವಕರು ಮತ್ತು ಐಟಿ ಉದ್ಯೋಗಿಗಳಲ್ಲಿ ದೃಷ್ಟಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ‘ಮಯೋಪಿಯಾ’ ಮತ್ತು ‘ಆಸ್ಟಿಗ್ಮಾಟಿಸಂ’ ಪ್ರಕರಣಗಳು ಹೆಚ್ಚುತ್ತಿವೆ’ ಎಂದು ಡಾ. ಅಗರ್ವಾಲ್ಸ್ ಐ ಆಸ್ಪತ್ರೆ ತಿಳಿಸಿದೆ.
ಈ ಸಮಸ್ಯೆಯ ಚಿಕಿತ್ಸೆಗೆ ಸಂಬಂಧಿಸಿದಂತೆ ಆಸ್ಪತ್ರೆಯು ನಗರದಲ್ಲಿ ‘ವೇವ್‌ಲೈಟ್ ಇಎಕ್ಸ್500 ಕಂಟೋರಾ ಎಕ್ಸಿಮರ್ ಲೇಸರ್’ ಎಂಬ ಯಂತ್ರವನ್ನು ಬಿಡುಗಡೆ ಮಾಡಿದೆ. ಇದು ನಿಖರ ಮತ್ತು ಗ್ರಾಹಕೀಕೃತ ಚಿಕಿತ್ಸೆ ಒದಗಿಸಲು ಸಹಕಾರಿಯಾಗಿದೆ.
‘ಡಿಜಿಟಲ್ ಪರದೆಯನ್ನು ನೋಡುವ ಸಮಯ ಹೆಚ್ಚುತ್ತಿರುವ ಜತೆಗೆ, ಹೊರಾಂಗಣ ಚಟುವಟಿಕೆ ಕಡಿಮೆ ಆಗುತ್ತಿದೆ. ಶೈಕ್ಷಣಿಕ ಒತ್ತಡವೂ ಮಕ್ಕಳಲ್ಲಿ ಹೆಚ್ಚುತ್ತಿದೆ. ಇದರಿಂದಾಗಿ ಮಯೋಪಿಯಾ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿ, ಚಿಕಿತ್ಸೆ ಒದಗಿಸಬೇಕು’ ಎಂದು ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‌ನ ಕ್ಲಿನಿಕಲ್ ಸೇವೆಗಳ ಮುಖ್ಯಸ್ಥ ಡಾ. ಅಮೋದ್ ನಾಯಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.