ADVERTISEMENT

ಅಗ್ನಿಕುಲ–ವಹ್ನಿಕುಲ ಕ್ಷತ್ರಿಯರ ಪ್ರತ್ಯೇಕ ನಿಗಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 17:41 IST
Last Updated 31 ಜನವರಿ 2021, 17:41 IST
ಸಮಾವೇಶದಲ್ಲಿ ಪಲ್ಲವ ರಾಜ ವಂಶಸ್ಥ ಮನ್ನಾರ್ ಚಿದಂಬರನಾಥನ್ ರಾಜ ಅವರನ್ನು ಸನ್ಮಾನಿಸಲಾಯಿತು. ವರ್ತೂರು ಜೆ.ಕೆ.ಗಿರೀಶ್, ದಕ್ಷಿಣ ಭಾರತ ಅಗ್ನಿಕುಲ ವಹ್ನಿಕುಲ ಕ್ಷತ್ರಿಯ ಪ್ರಾಚೀನ ಪಾರಸತ್ವ ಪರಿಶೋಧನಾ ಸಂಸ್ಥೆಯ ಅಧ್ಯಕ್ಷ ಚಿತ್ತಕೃಷ್ಣ ಬಾಬು, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ರೆಡ್ಡಿ ಹಾಗೂ ಪದಾಧಿಕಾರಿಗಳು ಇದ್ದರು –ಪ್ರಜಾವಾಣಿ ಚಿತ್ರ 

ಬೆಂಗಳೂರು: ‘ರಾಜ್ಯದಲ್ಲಿವಹ್ನಿಕುಲ ಕ್ಷತ್ರಿಯ ಹಾಗೂ ಅಗ್ನಿಕುಲ ಕ್ಷತ್ರಿಯ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು’ ಎಂದುಧರ್ಮರಾಜಕಾಪುರೆಡ್ಡಿಸಂಘದಸಂಸ್ಥಾಪಕ ವರ್ತೂರು ಜೆ.ಕೆ.ಗಿರೀಶ್ ಆಗ್ರಹಿಸಿದರು.

ದಕ್ಷಿಣ ಭಾರತ ಅಗ್ನಿಕುಲ ವಹ್ನಿಕುಲ ಪ್ರಾಚೀನ ಪಾರಸತ್ವ ಪರಿಶೋಧನಾ ಸಂಸ್ಥೆಯುಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕರಗದ ಕುಲಸ್ಥರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಮ್ಮ ಜನಾಂಗಕ್ಕೆ ಸಂಬಂಧಪಡದ ಕೆಲ ಜಾತಿಗಳಿದ್ದು, ಅವುಗಳನ್ನುಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆಯಬೇಕು. ಬೆಂಗಳೂರು ಕರಗ ಮಹೋತ್ಸವದ ಆರಾಧಕರು ಹಾಗೂ ಧರ್ಮರಾಯನ ಕುಲದವರಾದ ವಹ್ನಿಕುಲ ಕ್ಷತ್ರಿಯ ಮತ್ತು ಇದರ ಉಪಜಾತಿಗಳಾದ ವನ್ನೇ ರೆಡ್ಡಿ, ವನ್ನೇ ಕಾಪು, ಪಳ್ಳಿ ರೆಡ್ಡಿ, ಪಳ್ಳಿ ಕಾಪು, ಧರ್ಮರಾಜು ಕಾಪು, ವನ್ನಿಯರ್ ಗೌಂಡರ್, ವಹ್ನಿಕುಲ ಗೌಂಡರ್ ಈ ಜಾತಿಗಳನ್ನು ಪಟ್ಟಿಗೆ ಸೇರ್ಪಡೆ ಮಾಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.