ADVERTISEMENT

ಕೃಷಿ ಮಾಧ್ಯಮ ಪ್ರಶಸ್ತಿಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 23:59 IST
Last Updated 17 ಜುಲೈ 2025, 23:59 IST
   

ಬೆಂಗಳೂರು: ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವತಿಯಿಂದ ‘ಹೊಂಬಾಳೆ ಸಂಹಿತ ಹರಿಣಿಕುಮಾರ್ ಕೃಷಿ ಮಾಧ್ಯಮ ಪ್ರಶಸ್ತಿ-2025’ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಮುದ್ರಣ ಮತ್ತು ವಿದ್ಯುನ್ಮಾನ ಪತ್ರಕರ್ತರು, ನಿರೂಪಕರು, ಅಧಿಕಾರಿಗಳು ಮತ್ತು ವಿಸ್ತರಣಾ ಕಾರ್ಯಕರ್ತರು ಅರ್ಜಿ ಸಲ್ಲಿಸಬಹುದು.

ಪ್ರಶಸ್ತಿಯು ಪ್ರಮಾಣಪತ್ರ ಹಾಗೂ ₹10 ಸಾವಿರ ನಗದು ಬಹುಮಾನ ಒಳಗೊಂಡಿದೆ. ಅರ್ಜಿಯನ್ನು ಹಳೆಯ ವಿದ್ಯಾರ್ಥಿಗಳ ಸಂಘ, ಕೃಷಿ ವಿಶ್ವವಿದ್ಯಾನಿಲಯ, ಪಶುವೈದ್ಯಕೀಯ ಕಾಲೇಜು ಆವರಣ, ಹೆಬ್ಬಾಳ, ಬೆಂಗಳೂರು-560024 ಇಲ್ಲಿಗೆ ಆಗಸ್ಟ್‌ 14ರೊಳಗೆ ಸಲ್ಲಿಸಬೇಕು.

ವಿವರಗಳಿಗೆ ದೂರವಾಣಿ ಸಂ.080-23410754, alumniuasb83@gmail.com, ಜಾಲತಾಣ: www.alumniuasb.in ಸಂಪರ್ಕಿಸಬಹುದು ಎಂದು ಕಾರ್ಯಕಾರಿಣಿ ಸದಸ್ಯ ಕೆ.ಶಿವರಾಮು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.