ADVERTISEMENT

ಅಮೆಜಾನ್‌ಗೆ ₹ 1.56 ಲಕ್ಷ ವಂಚನೆ ಆರೋಪ: ದೂರು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 20:03 IST
Last Updated 13 ಫೆಬ್ರುವರಿ 2020, 20:03 IST
   

ಬೆಂಗಳೂರು: ಆನ್‌ಲೈನ್‌ನಲ್ಲಿ ಕೈಗಡಿಯಾರ, ಎಲೆಕ್ಟ್ರಾನಿಕ್‌ ಉಪಕರಣ, ಜೀನ್ಸ್‌ ಮತ್ತಿತರ ವಸ್ತುಗಳನ್ನು ಬುಕ್ ಮಾಡಿ ಹಣ ಪಾವತಿಸಿದ ವ್ಯಕ್ತಿಯೊಬ್ಬರು ಅವುಗಳ ಡೆಲಿವರಿ ಪಡೆದ ಬಳಿಕ ಪಾರ್ಸಲ್‌ನಲ್ಲಿ ಬಂದ ವಸ್ತುಗಳನ್ನು ಬದಲಾಯಿಸಿ ₹ 1.56 ಲಕ್ಷ ವಂಚಿಸಿದ್ದಾರೆಂದು ಆರೋಪಿಸಿ ಅಮೆಜಾನ್‌ ಕಂಪನಿ ಕೆ.ಜಿ ಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದೆ.

ಅಮೆಜಾನ್‌ ಟ್ರಾನ್ಸ್‌ಪೋರ್ಟೇಷನ್‌ ಸರ್ವಿಸಸ್‌ ಪ್ರೈವೇಟ್‌ ಲಿ. ತರುಣ್‌ ವರ್ಮ ಎಂಬುವರು ನೀಡಿರುವ ದೂರಿನಲ್ಲಿ ರಾಮಯ್ಯ ಬಡಾವಣೆ, ಫ್ಲವರ್‌ ಗಾರ್ಡನ್‌ನ ಬಾಬುಸಾ ಪಾಳ್ಯದ ನಿವಾಸಿ ಕ್ಲಿಫರ್ಡ್‌ ನಾವಿಸ್‌ ಜೆ. ಎಂಬುವರು ಬೇರೆ ಬೇರೆ ದಿನಾಂಕಗಳಲ್ಲಿ ಕೆಲವು ವಸ್ತುಗಳನ್ನು ಬುಕ್ ಮಾಡಿ ಪಡೆದು, ಆನಂತರ ಪಾರ್ಸಲ್‌ನಲ್ಲಿ ತಾವು ಆರ್ಡರ್‌ ಮಾಡಿದ ವಸ್ತುಗಳು ಬರದೆ ಬದಲಿ ವಸ್ತುಗಳು ಬಂದಿವೆ ಎಂದು ದೂರು ಕೊಟ್ಟು ಅವುಗಳನ್ನು ‍ಪ್ಯಾಕೇಟ್‌ನಲ್ಲಿ ಹಾಕಿ ಹಿಂತಿರುಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕ್ಲಿಫರ್ಡ್‌ ಖರೀದಿಸಿದ್ದ ವಸ್ತುಗಳಿಗೆ ಆನ್‌ಲೈನ್‌ನಲ್ಲಿ ಹಣ ಪಾವತಿಸಿದ್ದರು. ಆನಂತರ ಬದಲಿ ವಸ್ತುಗಳನ್ನು ವಾಪಸ್‌ ಕಳುಹಿಸಿ ₹ 1.56 ಲಕ್ಷ ವಾಪಸ್‌ ಪಡೆದು ವಂಚಿಸಿದ್ದಾರೆ ಎಂದು ವರ್ಮ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.