ADVERTISEMENT

ಬೆಂಗಳೂರಿನಲ್ಲಿ ಆಂಥ್ರೊಪಿಕ್‌ ಕಚೇರಿ ಆರಂಭ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 22:43 IST
Last Updated 16 ಫೆಬ್ರುವರಿ 2026, 22:43 IST
   

ಬೆಂಗಳೂರು: ಜಾಗತಿಕ ಮಟ್ಟದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕಂಪನಿ ಆಂಥ್ರೊಪಿಕ್‌, ಬೆಂಗಳೂರಿನ ಎಂಬಸಿ ಗಾಲ್ಫ್‌ ಲಿಂಕ್ಸ್‌ ಟೆಕ್‌ ಪಾರ್ಕ್‌ನಲ್ಲಿ ತನ್ನ ಕಚೇರಿಯನ್ನು ತೆರೆದಿದೆ.

ಇದು ಏಷ್ಯಾ–ಪೆಸಿಫಿಕ್ ಪ್ರದೇಶದಲ್ಲಿ ಆಂಥ್ರೊಪಿಕ್‌ನ ಎರಡನೇ ಕಚೇರಿ ಆಗಿದೆ.

ಭಾರತವು ಕ್ಲೌಡ್‌ ಎ.ಐಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ದೀರ್ಘಾವಧಿಯ ವ್ಯವಹಾರಕ್ಕಾಗಿ ಹೊಸ ಪಾಲುದಾರಿಕೆ ಪ್ರಾರಂಭಿಸುತ್ತಿದ್ದೇವೆ ಎಂದು ಕಂಪನಿ ‘ಎಕ್ಸ್‌’ನಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.