ಬೆಂಗಳೂರು: ಆರ್ಯ ಈಡಿಗ ಸಮುದಾದ ಈಡಿಗ, ಬಿಲ್ಲವ, ದೀವರು, ನಾಮಧಾರಿ, ನಾಡಾರ್, ಜೈಸ್ವಾಲ್ ಸೇರಿ 26 ಉಪಪಂಗಡಗಳ ವ್ಯಾಪಾರ, ವಹಿವಾಟು ಅಭಿವೃದ್ಧಿಗಾಗಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಡೈರೆಕ್ಟರಿ ವತಿಯಿಂದ ಆರ್ಯ ಈಡಿಗ ಬಿಜಿನೆಸ್ ನೆಟ್‌ವರ್ಕಿಂಗ್ ಗ್ರೂಪ್ ಆರಂಭಿಸಲಾಗಿದೆ.
‘ಸಮುದಾಯದವರ ವ್ಯಾಪಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್ಯ ಈಡಿಗ ಬಿಜಿನೆಸ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಇದರ ಮೂಲಕ ಈಡಿಗ ಸಮುದಾಯದವರ ವ್ಯಾಪಾರ ವಹಿವಾಟಿನ ವಿವರ, ಸ್ಥಳದ ಮಾಹಿತಿ ಪಡೆದು ಪರಸ್ಪರ ವಿಚಾರ ವಿನಿಮಯಕ್ಕೆ ಆ್ಯಪ್ ನೆರವಾಗಲಿದೆ’ ಎಂದು ಸಂಸ್ಥೆಯ ಜೈ ಜಗತ್ ಪ್ರಕಾಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.