ADVERTISEMENT

ಬೆಂಗಳೂರು: ಎಪಿಎಸ್‌ನಲ್ಲಿ ‘ಥಿಂಕ್ ರೂಮ್ ಡೇ’

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 18:06 IST
Last Updated 1 ಫೆಬ್ರುವರಿ 2026, 18:06 IST
ಎಪಿಎಸ್ ಪಬ್ಲಿಕ್ ಶಾಲೆಯಲ್ಲಿ ವಿಶಿಷ್ಟ ಅನುಭವ ಆಧಾರಿತ ಶಿಕ್ಷಣ ಕಾರ್ಯಕ್ರಮ ‘ಥಿಂಕ್ ರೂಮ್ ಡೇ’ ನಡೆಯಿತು.
ಎಪಿಎಸ್ ಪಬ್ಲಿಕ್ ಶಾಲೆಯಲ್ಲಿ ವಿಶಿಷ್ಟ ಅನುಭವ ಆಧಾರಿತ ಶಿಕ್ಷಣ ಕಾರ್ಯಕ್ರಮ ‘ಥಿಂಕ್ ರೂಮ್ ಡೇ’ ನಡೆಯಿತು.   

ಬೆಂಗಳೂರು: ಆಚಾರ್ಯ ಪಾಠಶಾಲಾ ಎಜುಕೇಷನಲ್ ಟ್ರಸ್ಟ್ (ಎಪಿಎಸ್‌ಇಟಿ) ಅಧೀನದಲ್ಲಿರುವ ಎಪಿಎಸ್ ಪಬ್ಲಿಕ್ ಶಾಲೆಯಲ್ಲಿ ವಿಶಿಷ್ಟ ಅನುಭವ ಆಧಾರಿತ ಶಿಕ್ಷಣ ಕಾರ್ಯಕ್ರಮ ‘ಥಿಂಕ್ ರೂಮ್ ಡೇ’ ನಡೆಯಿತು.

ನರ್ಸರಿಯಿಂದ ಹಿಡಿದು 8ನೇ ತರಗತಿಯವರೆಗಿನ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ನವೋದ್ಯಮದ ಕುರಿತು ಚಿಂತನೆ ನಡೆಸಲಾಯಿತು. ಕಾರ್ಯಕ್ರಮದ ಆಕರ್ಷಣೆಯಾಗಿದ್ದ ಥಿಂಕ್ ರೂಮ್‌ಗಳಲ್ಲಿ ತರಗತಿವಾರು ಪ್ರದರ್ಶನಗಳು ನಡೆದವು.

1ನೇ ತರಗತಿ ವಿದ್ಯಾರ್ಥಿಗಳು ತೆಂಗಿನಕಾಯಿ ಆಧಾರಿತ ಚಿಂತನೆ ಪ್ರದರ್ಶಿಸಿದರು. 2ನೇ ತರಗತಿ – ‘ಸ್ಮಾಲ್ ಡ್ರಾಪ್ಸ್, ಬಿಗ್ ಥಾಟ್ಸ್’, 3ನೇ ತರಗತಿ – ಆಹಾರ ಮತ್ತು ಪೌಷ್ಟಿಕತೆ, 4ನೇ ತರಗತಿ – ‘ಸುಗ್ಗಿ ಸಂಭ್ರಮ’, 5ನೇ ತರಗತಿ – ‘ಲೈಟ್: ದಿ ಇಲ್ಯೂಮಿನೇಟಿಂಗ್ ಪಾಥ್’, 6ನೇ ತರಗತಿ – ‘ಸ್ಮಾರ್ಟ್ ಸಿಟಿ: ವೇರ್ ಯಂಗ್ ಮೈಂಡ್ಸ್ ಡಿಸೈನ್ ದಿ ಫ್ಯೂಚರ್’, 7ನೇ ತರಗತಿ – ‘ಫ್ರಮ್ ಕ್ಲಾಸ್‌ರೂಮ್ ಟು ಕಫೆ ಡಿ‘ಇಕೋಲ್’ ಹಾಗೂ 8ನೇ ತರಗತಿ ವಿದ್ಯಾರ್ಥಿಗಳು ‘ಗಾನ ಜ್ಞಾನ’ ಎಂಬ ಸಂಗೀತ ಕಾರ್ಯಕ್ರಮವನ್ನು ಪ್ರದರ್ಶಿಸಿದರು.

ADVERTISEMENT

ಅತಿಥಿಯಾಗಿದ್ದ ಚಕ್ರವರ್ತಿ ಸೂಲಿಬೆಲೆ,  ಎಪಿಎಸ್‌ಇಟಿ ಅಧ್ಯಕ್ಷ ವಿಷ್ಣು ಭರತ್, ಪ್ರಧಾನ ಕಾರ್ಯದರ್ಶಿ ಎ. ಪ್ರಕಾಶ್, ಟ್ರಸ್ಟಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.