ADVERTISEMENT

ಆಶಿಕ್ ‘ಏರ್‌ ಕ್ವಾಲಿಟಿ ಕಮ್ಯುನಿಟಿ’ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2025, 14:12 IST
Last Updated 25 ಮಾರ್ಚ್ 2025, 14:12 IST
ಆಶಿಕ್ ಎಸ್‌.ವಿ
ಆಶಿಕ್ ಎಸ್‌.ವಿ   

ಬೆಂಗಳೂರು: ನಗರದ ಪಂಜುರ್ಲಿ ಲ್ಯಾಬ್ಸ್‌ನ ಸಿಇಒ ಆಶಿಕ್‌ ಎಸ್‌.ವಿ ಅವರನ್ನು ಅಮೆರಿಕದ ‘ಓಪನ್‌ ಎಕ್ಯು’ ಸಂಸ್ಥೆ ‘ಓಪನ್ ಏರ್‌ ಕ್ವಾಲಿಟಿ ಕಮ್ಯುನಿಟಿ ರಾಯಭಾರಿ’ ಆಗಿ ಆಯ್ಕೆ ಮಾಡಿದೆ.

ಕೆಳ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಯು ಗುಣಮಟ್ಟ ಸುಧಾರಣೆ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಯುವಕರನ್ನು ಆಯ್ದು ಅವರಿಗೆ ನಾಯಕತ್ವ ತರಬೇತಿ ನೀಡಲಾಗುತ್ತದೆ. ವಾಯು ಗುಣಮಟ್ಟದ ದತ್ತಾಂಶವನ್ನು ಬಳಸಿಕೊಂಡು ಶುದ್ಧಹವೆ ಮತ್ತು ವಾಯು ಅಸಮತೋಲನದ ವಿರುದ್ಧ ಹೋರಾಟ ನಡೆಸಲು ಮತ್ತು ಸಬಲೀಕರಣಗೊಳಿಸಲು ಸಂಶೋಧನೆಗಳಿಗಾಗಿ ‘ಓಪನ್‌ ಎಕ್ಯು’ ಒಂದು ವರ್ಷ ತರಬೇತಿ ನೀಡಲಿದೆ. ಅದಕ್ಕೆ ಅಗತ್ಯ ಇರುವ ಉಪಕರಣಗಳನ್ನೂ ಒದಗಿಸುತ್ತದೆ.

ಭಾರತವಲ್ಲದೇ, ಮೊರಾಕ್ಕೊ, ಉಜ್ಬೇಕಿಸ್ತಾನ, ಕೊಲಂಬಿಯಾ, ಟ್ಯುನೀಷಿಯಾ, ರವಾಂಡ, ಪೆರು, ಜಾಂಬಿಯಾ ಮತ್ತು ಉಗಾಂಡ ದೇಶಗಳಿಗೂ ರಾಯಭಾರಿಗಳನ್ನು ಆಯ್ಕೆ ಮಾಡಲಾಗಿದೆ.

ADVERTISEMENT

ವಿಶ್ವದಲ್ಲಿ ಶುದ್ಧ ಹವೆ ಆಂದೋಲನಕ್ಕಾಗಿ ನಾಸಾ ಮತ್ತು ಇತರ ಪ್ರತಿಷ್ಠಿತ ಸಂಸ್ಥೆಗಳು ‘ ಓಪನ್‌ ಎಕ್ಯು’ಗೆ ಧನ ಸಹಾಯ ನೀಡುತ್ತಿವೆ. ಆಶಿಕ್‌ ಎಸ್‌.ವಿ ಈ ಹಿಂದೆ ‘ಪ್ರಜಾವಾಣಿ ಸಾಧಕರ ಪ್ರಶಸ್ತಿ’ ಭಾಜನರಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.