ADVERTISEMENT

ಚಾಲಕನಿಂದ ಸಚಿವ ಹುದ್ದೆಯತನಕ: ಬದುಕಿನ ಹಾದಿ ನೆನೆದ ಶಿವರಾಮ ಹೆಬ್ಬಾರ್

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 22:03 IST
Last Updated 10 ಮಾರ್ಚ್ 2020, 22:03 IST
ಶಿವರಾಮ್ ಹೆಬ್ಬಾರ್ ಅವರನ್ನು ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಸನ್ಮಾನಿಸಿದರು. ಮಹಾಸಭಾದ ಸದಸ್ಯರು ಇದ್ದರು
ಶಿವರಾಮ್ ಹೆಬ್ಬಾರ್ ಅವರನ್ನು ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಸನ್ಮಾನಿಸಿದರು. ಮಹಾಸಭಾದ ಸದಸ್ಯರು ಇದ್ದರು   

ಬೆಂಗಳೂರು:‘ನಾನು ಚಾಲಕನಾಗಿದ್ದೆ. ಸ್ವಂತ ವಾಹನ ಇಟ್ಟುಕೊಂಡು ಐದು ರಾಜ್ಯಗಳಲ್ಲಿ ಸುತ್ತಾಡಿದೆ. ರಾಜಕೀಯ ಪ್ರವೇಶಿಸಿದ್ದು ಆಕಸ್ಮಿಕ...’ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಾವು ನಡೆದು ಬಂದ ಹಾದಿ ನೆನಪು ಮಾಡಿಕೊಂಡಿದ್ದು ಹೀಗೆ...

ಶ್ರೀ ಅಖಿಲ ಹವ್ಯಕ ಮಹಾಸಭಾ ಮಂಗಳವಾರ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸೋಲು–ಗೆಲುವಿನ ಹಾದಿ: ‘2008ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾನು ಸೋಲು ಕಾಣಬೇಕಾಯಿತು. ಆದರೆ, 2013,2019ರಲ್ಲಿ ಜಯ ಗಳಿಸಿದೆ.ಗೆದ್ದು ಕೇವಲ ಒಂದೂವರೆ ವರ್ಷದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸುಲಭದ ಮಾತಲ್ಲ. ಆದರೂ ಗಟ್ಟಿ ನಿರ್ಧಾರ ಮಾಡಿದೆ. ಜನತಾ ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಕ್ಕಿತು’ ಎಂದರು.

ADVERTISEMENT

ಖಾತೆಗಿಂತ ಕೆಲಸ ಮುಖ್ಯ:‘2.5 ಕೋಟಿ ಅಸಂಘಟಿತ ಕಾರ್ಮಿಕರು ಇರುವ ದೊಡ್ಡ ಖಾತೆಯನ್ನು ನನಗೆ ಕೊಟ್ಟಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸಿ, ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.