ADVERTISEMENT

ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ; ಮಹಿಳೆ ಸೆರೆ

​ಪ್ರಜಾವಾಣಿ ವಾರ್ತೆ
Published 11 ಮೇ 2019, 20:21 IST
Last Updated 11 ಮೇ 2019, 20:21 IST
ಮಾಧುರಿ
ಮಾಧುರಿ   

ಬೆಂಗಳೂರು: ಹೊರರಾಜ್ಯದ ಯುವತಿಯರನ್ನು ಬಳಸಿಕೊಂಡು ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಾಧುರಿ ಎಂಬಾಕೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಕೋರಮಂಗಲ 5ನೇ ಬ್ಲಾಕ್‌ನ ಕೆಎಚ್‌ಬಿ ಕಾಲೊನಿಯಲ್ಲಿ ‘ಸುಖಿ ಸ್ಪಾ ಆ್ಯಂಡ್ ಸಲೂನ್ ಯುನಿಸೆಕ್ಸ್’ ಪಾರ್ಲರ್ ನಡೆಸುತ್ತಿದ್ದ ಮಾಧುರಿ, ಹ್ಯಾಪಿ ಎಂಡಿಂಗ್, ಸ್ಯಾಂಡ್ ವಿಚ್ ಹಾಗೂ ಬಾಡಿ ಟು ಬಾಡಿ ಮಸಾಜ್‌ಗಳ ಹೆಸರಿನಲ್ಲಿ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದಳು. ಅಲ್ಲದೇ, ಪರಿಚಿತ ಗಿರಾಕಿಗಳನ್ನು ಕರೆಸಿಕೊಂಡು ವೇಶ್ಯಾವಾಟಿಕೆಯನ್ನೂ ನಡೆಸುತ್ತಿದ್ದರು’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಈ ದಂಧೆ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ಶುಕ್ರವಾರ ಸಂಜೆ ಸ್ಪಾ ಮೇಲೆ ದಾಳಿ ಮಾಡಿದೆವು. ಅಲ್ಲಿದ್ದ ಯುವತಿಯರಿಗೆ ಬುದ್ಧಿಮಾತು ಹೇಳಿ, ಅವರವರ ರಾಜ್ಯಗಳಿಗೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.