ADVERTISEMENT

ವಿದ್ಯಾರ್ಥಿಯ ಬೆತ್ತಲೆಗೊಳಿಸಿ ಹಲ್ಲೆ; ಕಳುವು

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 18:45 IST
Last Updated 16 ಜನವರಿ 2019, 18:45 IST

ಬೆಂಗಳೂರು: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ ಅವರನ್ನು ಬೆತ್ತಲೆಗೊಳಿಸಿ ಸ್ವತ್ತುಗಳನ್ನು ದೋಚಿದ ಕುರಿತು ಸರ್ಜಾಪುರ ಪೊಲೀಸ್‌ ಠಾಣೆಗೆ ದೂರು ಕೊಡಲಾಗಿದೆ.

ಭಾರತೀಯ ವಾಯು ಸೇನೆಯ ವಿಂಗ್‌ ಕಮಾಂಡರ್‌ ಒಬ್ಬರ ಮಗನಾದ ಈ ವಿದ್ಯಾರ್ಥಿ ಮೇಲೆ ಜ.14ರಂದು ಮೂವರ ತಂಡವು ಹಲ್ಲೆ ಮಾಡಿ ಸ್ವತ್ತು ದೋಚಿದೆ.

‘ಬಸ್‌ ತಪ್ಪಿದ ಕಾರಣ ಸುಮಾರು 1.5 ಕಿಮೀ ನಡೆದು ಹೋಗಬೇಕಾಯಿತು. ಆಗ ಮೂವರು ದಿಢೀರನೆ ಬಂದು ವಿನಾ
ಕಾರಣ ಹಲ್ಲೆ ಮಾಡಿತು. ಮಾದಕ ವಸ್ತು ಸೇವಿಸಿ ಮದ್ಯಪಾನ ಮಾಡಿದವರಂತೆ ಇದ್ದ ಈ ಮೂವರು ಸಮೀಪದ ಗದ್ದೆಗೆ ಎಳೆದೊಯ್ದರು. ಹಲ್ಲೆಯ ಬಳಿಕ ನನ್ನನ್ನು ಬೆತ್ತಲೆ ಮಾಡಿದರು’ ಎಂದು 21 ವರ್ಷದ ಈ ವಿದ್ಯಾರ್ಥಿ ದೂರಿದ್ದಾರೆ.

ADVERTISEMENT

‘ಕಬ್ಬಿಣದ ಸರಳಿನಿಂದ ಹಲ್ಲೆ ಮಾಡಿ, ಬೆಲ್ಟ್‌ನಿಂದ ಮರಕ್ಕೆ ಕಟ್ಟಿ ಹಾಕಿದರು. ಪ್ಲಾಸ್ಟಿಕ್‌ ಪೇಪರ್‌ಗೆ ಬೆಂಕಿ ಹಚ್ಚಿ ಮುಖಕ್ಕೆ ಹಿಡಿದರು. ಮುಖಕ್ಕೆ ಉಗಿದು ಮೈಮೇಲೆ ಮೂತ್ರ ಮಾಡಿದರು. ಮೊಬೈಲ್‌, ಸ್ಮಾರ್ಟ್‌ ವಾಚ್‌, ಪರ್ಸ್‌, ಎಟಿಎಂ ಕಾರ್ಡ್‌, ಪಾನ್‌ ಕಾರ್ಡ್‌, ಬಟ್ಟೆ, ಷೂ ಕಿತ್ತುಕೊಂಡು ಹೋಗಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.