ADVERTISEMENT

ನೃತ್ಯ, ಮದ್ಯದ ಪಾರ್ಟಿ ನಡೆಸುತ್ತಿದ್ದ ಬಾರ್‌ ಮೇಲೆ ದಾಳಿ: 104 ಮಂದಿ ವಶ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 22:07 IST
Last Updated 4 ಸೆಪ್ಟೆಂಬರ್ 2022, 22:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ನಿಯಮಬಾಹಿರವಾಗಿ ನೃತ್ಯ ಹಾಗೂ ಮದ್ಯದ ಪಾರ್ಟಿ ನಡೆಸುತ್ತಿದ್ದ ಆರೋಪದಡಿ ರಾಯಲ್ ಆರ್ಕೆಡ್‌ನ ಜೆಪ್ ಬಾರ್‌ನ ಮೇಲೆ ಸಿಸಿಬಿ ಪೊಲೀಸರು ಶನಿವಾರ ದಾಳಿ ಮಾಡಿದ್ದು, ₹ 1.83 ಲಕ್ಷ ನಗದು ಜಪ್ತಿ
ಮಾಡಿದ್ದಾರೆ.

‘ಜೀವನ್‌ಬಿಮಾನಗರ ಠಾಣೆ ವ್ಯಾಪ್ತಿಯ ಕೋಡಿಹಳ್ಳಿ ಬಳಿಯ ಹೋಟೆಲ್‌ನಲ್ಲಿ ಬಾರ್ ಇದೆ. ಅಬಕಾರಿ, ವಹಿವಾಟು ಪರವಾನಗಿ ನಿಯಮ ಉಲ್ಲಂಘಿಸಿ ಪಾರ್ಟಿ ನಡೆಸಲಾಗುತ್ತಿತ್ತು. ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ದಾಳಿ ಮಾಡಿದರು’ ಎಂದು ಸಿಸಿಬಿಪೊಲೀಸರು ಹೇಳಿದರು.

‘ವ್ಯವಸ್ಥಾಪಕ ಸೇರಿ ಏಳು ಮಂದಿ ಯನ್ನು ಬಂಧಿಸಲಾಗಿದೆ. ಪಾರ್ಟಿಯಲ್ಲಿದ್ದ 30 ಯುವತಿಯರು ಸೇರಿದಂತೆ 104 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ತಿಳಿಸಿದರು.

ADVERTISEMENT

ಪಾರ್ಟಿಗೆ ಪ್ರವೇಶ ಶುಲ್ಕ: ‘ಬಾರ್‌ನಲ್ಲಿ ಪಾರ್ಟಿ ಆಯೋಜನೆ ಬಗ್ಗೆ ಜಾಹೀರಾತು ನೀಡಲಾಗಿತ್ತು. ಯುವಕ–ಯುವತಿಯರು ಪ್ರವೇಶ ಶುಲ್ಕ ನೀಡಿ ಪಾಲ್ಗೊಂಡಿದ್ದರು. ಆದರೆ, ಪಾರ್ಟಿಗೆ ಯಾವುದೇ ಅನುಮತಿ ಇರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ಡಿಜೆ ಸಂಗೀತ ಕಾರ್ಯಕ್ರಮ ನಡೆಸಲಾಗಿತ್ತು. ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಸಹ ಮಾಡಲಾಗುತ್ತಿತ್ತು. ಬಾರ್‌ನ ಮಾಲೀಕ ಹಾಗೂ ಇತರರ ವಿರುದ್ಧ ಜೀವನ್‌ಬಿಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.