ADVERTISEMENT

ಕಾಣೆಯಾಗಿದ್ದ ಯುವತಿಯನ್ನು ಪೋಷಕರಿಗೆ ಒಪ್ಪಿಸಿದ ಆಟೋ ಚಾಲಕ: ಪೊಲೀಸರ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 4:31 IST
Last Updated 26 ಸೆಪ್ಟೆಂಬರ್ 2022, 4:31 IST
ಆಟೋ ಚಾಲಕ ವಿಜಯ್‌
ಆಟೋ ಚಾಲಕ ವಿಜಯ್‌    

ಬೆಂಗಳೂರು: ಮನೆಯಿಂದ ಕಾಣೆಯಾಗಿ, ಮಧ್ಯರಾತ್ರಿ ಒಬ್ಬಂಟಿಯಾಗಿ ಅಲೆದಾಡುತ್ತಿದ್ದ ಯುವತಿಯೊಬ್ಬರನ್ನು ಸುರಕ್ಷಿತವಾಗಿ ಆಕೆ ಪೋಷಕರ ಬಳಿ ಸೇರಿಸಿದ ಆಟೋ ಚಾಲಕರೊಬ್ಬರನ್ನು ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಪ್ರಶಂಸಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರತಾಪ್‌ ರೆಡ್ಡಿ, ‘ಚಾಮರಾಜಪೇಟೆಯಿಂದ ಯುವತಿಯೊಬ್ಬರು ನಿನ್ನೆ (ಸೆ.24) ಸಂಜೆ ಕಾಣೆಯಾಗಿದ್ದು, ಮಧ್ಯರಾತ್ರಿ ಕೆ. ಆರ್. ಪುರ ಹತ್ತಿರದ ಟಿನ್ ಫ್ಯಾಕ್ಟರಿ ಬಳಿ ಒಬ್ಬಂಟಿಯಾಗಿ ಸುತ್ತಾಡುತ್ತಿದ್ದನ್ನು ಆಟೋ ಚಾಲಕ ವಿಜಯ್ ರವರು ಗಮನಿಸಿ, ಅವರನ್ನು ವಿಚಾರಿಸಿ ಸಹೋದರನಂತೆ ಧೈರ್ಯ ತುಂಬಿ ಆಕೆಯ ಪೋಷಕರನ್ನು ಸಂಪರ್ಕಿಸಿ ಸುರಕ್ಷಿತವಾಗಿ ಒಪ್ಪಿಸಿರುತ್ತಾರೆ. ಆಟೋ ಚಾಲಕ ವಿಜಯ್ ರವರ ಈ ಸಾಮಾಜಿಕ ಕಾಳಜಿಯನ್ನು ಪೊಲೀಸ್ ಇಲಾಖೆ ಶ್ಲಾಘಿಸುತ್ತದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಸೆ. 24ರಿಂದ ಯುವತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು ಎನ್ನಲಾಗಿದೆ.

ADVERTISEMENT

ಆಟೋ ಚಾಲಕ ವಿಜಯ್‌ ಅವರ ಬಗ್ಗೆ ಸಾರ್ವಜನಿಕರಿಂದಲೂ ಪ್ರಶಂಸೆಯೂ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.