ADVERTISEMENT

ಬೆಂಗಳೂರು: ನಗರ ಸಂಚಾರ ಪೊಲೀಸರು ಜಾರಿಗೆ ತಂದಿದ್ದ ಅಸ್ತ್ರಂ ಯೋಜನೆಗೆ 3 ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2024, 15:23 IST
Last Updated 20 ಡಿಸೆಂಬರ್ 2024, 15:23 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಗರದಲ್ಲಿ ವಾಹನ ದಟ್ಟಣೆ ಸುಧಾರಣೆಗಾಗಿ ನಗರ ಸಂಚಾರ ಪೊಲೀಸರು ಜಾರಿಗೆ ತಂದಿದ್ದ ‘ಅಸ್ತ್ರಂ’ ಯೋಜನೆಗೆ ಮೂರು ಪ್ರಶಸ್ತಿಗಳು ಲಭಿಸಿವೆ.

ಕಳೆದ ಜನವರಿಯಲ್ಲಿ ನಡೆದ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ತಿಂಗಳು’ ಕಾರ್ಯಕ್ರಮದ ವೇಳೆ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. 

ADVERTISEMENT

ಎಂಜಿನಿಯರಿಂಗ್‌ ಎಕ್ಸಲೆನ್ಸ್ ಅವಾರ್ಡ್, ಇನ್‌ಫ್ರಾ ಲೀಡರ್‌ಶಿಪ್‌ ಪ್ರಶಸ್ತಿ–2024 ಹಾಗೂ ಉತ್ತಮ ಸಾರಿಗೆ ಉಪಕ್ರಮ ಪ್ರಶಸ್ತಿಗಳು ಲಭಿಸಿವೆ.

ಇದು ‘ಸ್ಮಾರ್ಟ್‌ ಎಂಜಿನ್‌’ ವ್ಯವಸ್ಥೆಯಾಗಿದ್ದು, ಕೃತಕ ಬುದ್ಧಿಮತ್ತೆ ಅಡಿ ನಗರದ ಯಾವ ಭಾಗದಲ್ಲಿ ಹೆಚ್ಚಿನ ದಟ್ಟಣೆಯಿದೆ ಎಂಬುದನ್ನು ಪತ್ತೆ ಹಚ್ಚುತ್ತದೆ. ಈ ‘ಸ್ಮಾರ್ಟ್‌ ಎಂಜಿನ್‌’, ಸಂಚಾರ ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ರವಾನಿಸಲಿದೆ. ಇದನ್ನು ಬಳಸಿಕೊಂಡು ಸಂಚಾರ ಸುಧಾರಣೆ ಮಾಡಲಾಗುತ್ತಿದೆ. ನಗರದ ಹಲವು ಜಂಕ್ಷನ್‌ಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.