ADVERTISEMENT

ಬಾಬು ಜಗಜೀವನರಾಮ್ ಸಂಶೋಧನಾ ಕೇಂದ್ರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 22:01 IST
Last Updated 25 ಜನವರಿ 2023, 22:01 IST
ಪ್ರೊ.ಸಮತಾ ಬಿ ದೇಶಮಾನೆ ಬರೆದ ವಿಶ್ವ ದಾಖಲೆಯ ಸೋಲಿಲ್ಲದ ಸರದಾರ ಬಾಬು ಜಗಜೀವನರಾಮ್ ಪುಸ್ತಕವನ್ನು ಕುಲಪತಿ ಡಾ.ಎಸ್.ಎಂ.ಜಯಕರ್ ಹಾಗೂ ನಿಕಟಪೂರ್ವ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಬಿಡುಗಡೆಗೊಳಿಸಿದರು. ಕುಲಸಚಿವ ಮಹೇಶ್ ಬಾಬು, ಪ್ರೊ.ಗಂಗಾಧರ್ ಮತ್ತಿತರರು ಇದ್ದಾರೆ.
ಪ್ರೊ.ಸಮತಾ ಬಿ ದೇಶಮಾನೆ ಬರೆದ ವಿಶ್ವ ದಾಖಲೆಯ ಸೋಲಿಲ್ಲದ ಸರದಾರ ಬಾಬು ಜಗಜೀವನರಾಮ್ ಪುಸ್ತಕವನ್ನು ಕುಲಪತಿ ಡಾ.ಎಸ್.ಎಂ.ಜಯಕರ್ ಹಾಗೂ ನಿಕಟಪೂರ್ವ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಬಿಡುಗಡೆಗೊಳಿಸಿದರು. ಕುಲಸಚಿವ ಮಹೇಶ್ ಬಾಬು, ಪ್ರೊ.ಗಂಗಾಧರ್ ಮತ್ತಿತರರು ಇದ್ದಾರೆ.   

ಕೆಂಗೇರಿ: ಹಸಿರು ಕ್ರಾಂತಿಯ ಹರಿಕಾರರಾಗಿದ್ದ ಬಾಬು ಜಗಜೀವನ ರಾಮ್, ಬಾಲ್ಯದಿಂದಲೇ ಶೋಷಣೆ ಹಾಗೂ ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿದ್ದರು. ಅವರ ಹೋರಾಟದ ಜೀವನ ಯುವಜನಾಂಗಕ್ಕೆ ಎಂದಿಗೂ ಮಾದರಿ ಎಂದು ಬೆಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಸ್.ಎಂ.ಜಯಕರ್ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಡಾ.ಬಾಬು ಜಗಜೀವನ ರಾಮ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕುಲಸಚಿವ ಡಾ.ಎನ್.ಮಹೇಶ್ ಬಾಬು, ನಿಕಟಪೂರ್ವ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಮಾತನಾಡಿದರು.

ಇದೇ ವೇಳೆ ಪ್ರೊ. ಸಮತಾ ಬಿ ದೇಶಮಾನೆ ಬರೆದ ವಿಶ್ವ ದಾಖಲೆಯ ಸೋಲಿಲ್ಲದ ಸರದಾರ ಸಮಾಜ ವಿಜ್ಞಾನಿ ಜಗಜೀವನರಾಮ್ ಪುಸ್ತಕವನ್ನು ಕುಲಪತಿ ಡಾ.ಜಯಕರ್ ಹಾಗೂ ನಿಕಟಪೂರ್ವ ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ್ ಬಿಡುಗಡೆ ಮಾಡಿದರು. ಹಣಕಾಸು ಅಧಿಕಾರಿ ಎಸ್. ಅಜಿತ್ ಕುಮಾರ್ ಹೆಗಡೆ, ಸಿಂಡಿಕೇಟ್ ಸದಸ್ಯ ಸುಧಾಕರ್, ಕುಲ ಸಚಿವ (ಮೌಲ್ಯ ಮಾಪನ) ಡಾ.ಜೆ.ಟಿ.ದೇವರಾಜ್, ಡಾ.ಬಾಬು ಜಗಜೀವನರಾಮ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಡಾ.ಬಿ.ಗಂಗಾಧರ್, ನಿಕಟ ಪೂರ್ವ ಸಿಂಡಿಕೇಟ್ ಸದಸ್ಯ ಸಿಂಹ, ಎಇಇ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.