ADVERTISEMENT

ಸರಳ ಬಕ್ರೀದ್ ಆಚರಣೆ, ಶುಭ ಕೋರುವಾಗ ಆಲಿಂಗನಕ್ಕೆ ಇರಲಿಲ್ಲ ಅವಕಾಶ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 6:03 IST
Last Updated 2 ಆಗಸ್ಟ್ 2020, 6:03 IST
ಬಕ್ರೀದ್ ಅಂಗವಾಗಿ ಮುಸ್ಲಿಂ ಸಮುದಾಯದ ಕುಟುಂಬದ ಸದಸ್ಯರುಗಳು ಮನೆಯಲ್ಲೇ ಪ್ರಾರ್ಥನೆಯಲ್ಲಿ ತೊಡಗಿದರು - ಪ್ರಜಾವಾಣಿ ಚಿತ್ರ 
ಬಕ್ರೀದ್ ಅಂಗವಾಗಿ ಮುಸ್ಲಿಂ ಸಮುದಾಯದ ಕುಟುಂಬದ ಸದಸ್ಯರುಗಳು ಮನೆಯಲ್ಲೇ ಪ್ರಾರ್ಥನೆಯಲ್ಲಿ ತೊಡಗಿದರು - ಪ್ರಜಾವಾಣಿ ಚಿತ್ರ    

ಬೆಂಗಳೂರು: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಈ ಬಾರಿ ಅತ್ಯಂತ ಸರಳ ವಾಗಿ ಆಚರಿಸಿದರು. ಕೊರೊನಾ ಸೋಂಕು ವ್ಯಾಪಕವಾಗಿರುವುದರಿಂದ, ಮಸೀದಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ ವಿಶೇಷ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಹಬ್ಬದ ಸಂಪ್ರದಾಯವಾದ ಕೈ ಕುಲುಕುವುದು ಹಾಗೂ ಆಲಿಂಗನ ಮಾಡಿಕೊಳ್ಳಲು ಈ ಬಾರಿ ಅವಕಾಶ ಇರಲಿಲ್ಲ. ನಮಾಜ್ ವೇಳೆ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳುವಂತೆ ಸೂಚಿಸ ಲಾಗಿತ್ತು.

ಕಲಾಸಿಪಾಳ್ಯ, ಚಾಮರಾಜಪೇಟೆ, ಶಾಂತಿನಗರ, ಮೈಸೂರು ರಸ್ತೆ, ಜಯನಗರ, ಬಿಟಿಎಂ ಬಡಾವಣೆ, ಪಾದರಾಯನಪುರ, ಶಿವಾಜಿನಗರ, ಹೆಬ್ಬಾಳ, ಆರ್‌.ಟಿ.ನಗರದ ಪ್ರಮುಖ ಮಸೀದಿಗಳಲ್ಲಿ ಸರ್ಕಾರದ ನಿಯಮಗಳ ಪಾಲನೆಯೊಂದಿಗೆ ಈದ್ ಸಾಮೂಹಿಕ ಪ್ರಾರ್ಥನೆ ನಡೆದವು.

ADVERTISEMENT

ಕೊರೊನಾ ಸೋಂಕು ಹರಡುವಿಕೆ ತಡೆಯಲು ಮಸೀದಿಗಳಲ್ಲಿ ಪ್ರಾರ್ಥನೆಗೆ ಬರುವವರ ದೇಹದ ಉಷ್ಣಾಂಶ ಪರೀಕ್ಷೆ ಹಾಗೂ ಸ್ಯಾನಿಟೈಸರ್ ಬಳಸಿ ಕೈತೊಳೆಯುವುದನ್ನು ಕಡ್ಡಾಯಗೊಳಿಸಲಾಗಿತ್ತು. ಮುಖಗವಸು ಧರಿಸಿದವರಿಗೆ ಮಾತ್ರ ಮಸೀದಿಯೊಳಗೆ ಪ್ರವೇಶ ಕಲ್ಪಿ ಸಲಾಯಿತು. ಮಸೀದಿಗಳಲ್ಲಿ ಹೆಚ್ಚು ಮಂದಿ ಸೇರಲು ಅನುಮತಿ ಇಲ್ಲದ ಕಾರಣ ನಿಗದಿತ ಸಂಖ್ಯೆಯ ಜನರಿಗೆ ಪ್ರಾರ್ಥನೆ ಸಲ್ಲಿಸಲು ಗುರುತಿನ ಚೀಟಿ ನೀಡಲಾಗಿತ್ತು.

ಬಕ್ರೀದ್ ಪ್ರಯುಕ್ತ ಶಿವಾಜಿನಗರದ ಮಸ್ಜಿದ್ ಅಜಂ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಬಂದವರನ್ನು ಥರ್ಮಲ್ ತಪಾಸಣೆಗೆ ಒಳಪಡಿಸಲಾಯಿತು ಪ್ರಜಾವಾಣಿ ಚಿತ್ರ

ಈ ಹಬ್ಬಕ್ಕೆ ಪ್ರಾಣಿ ಬಲಿ ಕೊಟ್ಟು ಅದರ ಮಾಂಸವನ್ನು ಮೂರು ಸಮ ಭಾಗ ಮಾಡಿ ಒಂದು ಭಾಗವನ್ನು ತಮಗೆ ಹಾಗೂ ಉಳಿದೆರಡು ಭಾಗಗಳನ್ನು ಸಂಬಂಧಿಕರು ಅಥವಾ ಬಡವರಿಗೆ ಹಂಚುವುದು ಸಂಪ್ರದಾಯ.

ಆದರೆ, ಕೊರೊನಾದಿಂದಾಗಿ ಸಮುದಾಯದವರು ಈ ಸಲ ಅದ್ದೂರಿಯಾಗಿ ಹಬ್ಬದ ಆಚರಣೆಗೆ ಮುಂದಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.