ಬೆಂಗಳೂರು: ನಗರದಲ್ಲಿ ಆಟೊ ಪ್ರಯಾಣದ ಪರಿಷ್ಕೃತ ದರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ.
ಮೊದಲ ಎರಡು ಕಿ.ಮೀ.ಗೆ ₹36 (ಕನಿಷ್ಠ) ನಿಗದಿಪಡಿಸಲಾಗಿದೆ. ಬಳಿಕ ಪ್ರತಿ ಕಿ.ಮೀ.ಗೆ ₹18 ದರವಿರಲಿದೆ.
ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಒಂದೂವರೆ ಪಟ್ಟು ಅಧಿಕ ದರ ವಿಧಿಸಬಹುದು. ಮೊದಲ ಐದು ನಿಮಿಷ ಕಾಯುವಿಕೆ ಉಚಿತವಾಗಿದ್ದು, ಬಳಿಕ ಪ್ರತಿ 15 ನಿಮಿಷಕ್ಕೆ ₹10 ನಿಗದಿಯಾಗಿದೆ. 20 ಕೆ.ಜಿ.ವರೆಗಿನ ಲಗೇಜಿಗೆ ಶುಲ್ಕವಿಲ್ಲ. ಅದಕ್ಕಿಂತ ಹೆಚ್ಚಿಗೆ ಇದ್ದರೆ ₹10 ದರ. ಪ್ರಯಾಣಿಕರು ಆಟೊದಲ್ಲಿ 50 ಕೆ.ಜಿ.ವರೆಗೆ ಮಾತ್ರ ಲಗೇಜು ಸಾಗಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪರಿಷ್ಕತ ಪ್ರಯಾಣ ದರವನ್ನು ಆಟೊ ಮೀಟರ್‌ಗಳಲ್ಲಿ ಅಳವಡಿಸಿಕೊಳ್ಳಲು ಅಕ್ಟೋಬರ್ 31ರವರೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.