ಬೆಂಗಳೂರು: ಮಾರತಹಳ್ಳಿ ಠಾಣೆ ವ್ಯಾಪ್ತಿಯ ರಾಜಕಾಲುವೆಯಲ್ಲಿ 6 ವರ್ಷದ ಮಗು ಕೊಚ್ಚಿ ಹೋಗಿದೆ.
ನಗರದಲ್ಲಿ ಗುರುವಾರ ರಾತ್ರಿಯಿಡಿ ಮಳೆ ಆಗಿದೆ. ರಾಜಕಾಲುವೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದೆ. ಆಟವಾಡುತ್ತಿದ್ದ ವೇಳೆಯೇ ಶುಕ್ರವಾರ ಮಧ್ಯಾಹ್ನ ರಾಜಕಾಲುವೆಗೆ ಬಿದ್ದು ಮೊನಾಲಿಕ (6) ಎಂಬ ಮಗು ಕೊಚ್ಚಿ ಹೋಗಿದೆ.
ಮಂತ್ರಿ ಅಪಾರ್ಟ್‌ಮೆಂಟ್ ಬಳಿ ಈ ಘಟನೆ ನಡೆದಿದೆ. ಮೊನಾಲಿಕ ತಂದೆ ನಿತ್ಯಾನಂದ, ಅಸ್ಸಾಂನವರು.
ಸ್ಥಳಕ್ಕೆ ಮಾರತಹಳ್ಳಿ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದಾರೆ. ಮಗುವಿಗಾಗಿ ಹುಡುಕಾಟ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.