ಪೀಣ್ಯ,ದಾಸರಹಳ್ಳಿ: ಮಲ್ಲಸಂದ್ರದ ಜುಂಜಪ್ಪ ಸ್ವಾಮಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ನಡೆಯಿತು.
‘ಜುಂಜಪ್ಪ ಸ್ವಾಮಿಯು ಮೂಲತಃ ಯಾದವ ಸಮುದಾಯವರು. ಈ ದೇವಾಲಯದಲ್ಲಿ ಪೂಜೆ ಮಾಡಿದರೆ ಭಕ್ತರ ಮನೆಯಲ್ಲಿ ಹಾವು, ಚೇಳುಗಳು ಕಾಣುವುದಿಲ್ಲ ಎಂಬ ಪ್ರತೀತಿಯಿದೆ. ಹಾಗಾಗಿ ಅಕ್ಕಪಕ್ಕದ ಗ್ರಾಮಸ್ಥರೆಲ್ಲರೂ ಇಲ್ಲಿ ಬಂದು ಜುಂಜಪ್ಪ ಸ್ವಾಮಿಯನ್ನು ಪೂಜಿಸುತ್ತಾರೆ’ ಎಂದು ಶಾಸಕ ಎಸ್. ಮುನಿರಾಜು ಹೇಳಿದರು.
ಮಲ್ಲಸಂದ್ರ ಸಮೀಪದ ಜುಂಜಪ್ಪ ಸ್ವಾಮಿ ದೇವಸ್ಥಾನದಲ್ಲಿ ಜುಂಜಪ್ಪ ದೇವರಿಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಯಾದವ ಸಮುದಾಯದ ಅರ್ಚಕರಿಂದ ಪೂಜಿಸಲಾಗುವ ಕೃಷ್ಣನ ವಿಗ್ರಹವಿರುವ ಈ ದೇವರನ್ನು ಹಳ್ಳಿ ಭಾಷೆಯಲ್ಲಿ ಜುಂಜಪ್ಪ ಸ್ವಾಮಿ ಎಂದು ಕರೆಯುತ್ತಾರೆ. ಮಲ್ಲಸಂದ್ರದ ಅಕ್ಕಪಕ್ಕದ ಜನರೆಲ್ಲರೂ ಪ್ರತಿ ವರ್ಷ ಪೂಜೆ ಸಲ್ಲಿಸುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.