ADVERTISEMENT

ನೋಂದಣಿಗೆ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 20:10 IST
Last Updated 1 ಏಪ್ರಿಲ್ 2019, 20:10 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದ 2018-19ನೇ ಸಾಲಿಗೆಪದವಿ ಮತ್ತು ಸ್ನಾತಕೋತ್ತರ ಪದವಿಗೆ ನೋಂದಾಯಿಸಿಕೊಳ್ಳಲು ಏ.15ರವರೆಗೆ ಅವಧಿ ವಿಸ್ತರಿಸಲಾಗಿದೆ.

ಪದವಿಯ ಬಿಎ, ಬಿಕಾಂ, ಬಿಬಿಎಂ (ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷ) ಮತ್ತು ಸ್ನಾತಕೋತ್ತರ ಪದವಿಯ ಎಂಎ, ಎಂಕಾಂ, ಎಂಎಸ್ಸಿ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಬಹುದು.

ವಿದ್ಯಾರ್ಥಿಗಳು ವಿಳಂಬ ಶುಲ್ಕದೊಂದಿಗೆ ಅರ್ಜಿ ಶುಲ್ಕವನ್ನು (₹ 1000), ಪ್ರವೇಶಾತಿ ಶುಲ್ಕದ ಜೊತೆಗೆ ಪಡೆದು ನಿರ್ದೇಶನಾಲಯದಲ್ಲಿ ಪ್ರವೇಶಾತಿ ಪಡೆಯಬಹುದು. ‘ವಿತ್ತಾಧಿಕಾರಿ,ಬೆಂಗಳೂರು ವಿಶ್ವವಿದ್ಯಾಲಯ’ ಹೆಸರಿನಲ್ಲಿ ಡಿ.ಡಿ ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.