ADVERTISEMENT

ಉಪಚುನಾವಣೆ: ನಾಮಪತ್ರ ಸಲ್ಲಿಕೆಗೆ ಇಂದು ಕಡೆ ದಿನ

​ಪ್ರಜಾವಾಣಿ ವಾರ್ತೆ
Published 15 ಮೇ 2019, 20:45 IST
Last Updated 15 ಮೇ 2019, 20:45 IST

ಬೆಂಗಳೂರು: ಸಗಾಯಪುರ ಮತ್ತು ಕಾವೇರಿಪುರ ವಾರ್ಡ್‌ಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕಡೆ ದಿನವಾಗಿದ್ದು, ಈವರೆಗೆ ಎರಡೂ ಕ್ಷೇತ್ರಗಳಿಂದ 10 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಸಗಾಯಪುರ ಕ್ಷೇತ್ರದಲ್ಲಿ ಪಳನಿ ಅಮ್ಮಾಳ್(ಕಾಂಗ್ರೆಸ್‌), ಫಿಲಿಪ್ಸ್ ಸ್ಟೀಫನ್‌(ಪಕ್ಷೇತರ), ಪುರುಷೋತ್ತಮ(ಕರ್ನಾಟಕ ಕಾರ್ಮಿಕರ ಪಕ್ಷ), ಪಳನಿ(ಪಕ್ಷೇತರ), ಮಾರಿಮುತ್ತು(ಪಕ್ಷೇತರ), ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಮುಜ್ಜಮಿಲ್ ಪಾಷಾ ಮತ್ತುಸೈಯದ್ ಮಸೂದ್ ನಾಮ‍‍‍ಪತ್ರಸಲ್ಲಿಸಿದ್ದಾರೆ.

ಕಾಂಗ್ರೆಸ್–ಜೆಡಿಎಸ್ ಪಕ್ಷಗಳು ಒಟ್ಟಾಗಿಯೇ ಈ ‌ಚುನಾವಣೆಯನ್ನೂ ಎದುರಿಸುತ್ತಿದ್ದು, ಸಗಾಯಪುರದಲ್ಲಿ ಪಳನಿ ಅಮ್ಮಾಳ್ ಮೈತ್ರಿ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾರಿಮುತ್ತು ಬಂಡಾಯವಾಗಿ ಸ್ಪರ್ಧಿಸಿದ್ದಾರೆ.

ADVERTISEMENT

‘ಈ ಹಿಂದೆಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾರಿಮುತ್ತು ಅವರು ಅಕಾಂಕ್ಷಿಯಾಗಿದ್ದರು. ಮೈತ್ರಿ ಧರ್ಮ ಪಾಲನೆಯ ಕಾರಣಕ್ಕೆ ಪಳನಿ ಅಮ್ಮಾಳ್ ಅವರನ್ನು ಕಣಕ್ಕೆ ಇಳಿಸಲಾಗಿದೆ. ಮಾರಿಮುತ್ತು ಅವರೊಂದಿಗೆ ಮುಖಂಡರು ಮಾತುಕತೆ ನಡೆಸಿ ನಾಮಪತ್ರ ವಾಪಸ್ ತೆಗೆಸಲಿದ್ದಾರೆ’ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾವೇರಿಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಿ.ಪಲ್ಲವಿ ಚನ್ನಪ್ಪ, ಜೆಡಿಎಸ್‌ನಿಂದ ಸುಶೀಲಾ ಸುರೇಶ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಕಮಲಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.