ADVERTISEMENT

ಪಾಲಿಕೆಯ ಮತ್ತೊಬ್ಬ ನೌಕರ ಸಾವು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 20:59 IST
Last Updated 8 ಆಗಸ್ಟ್ 2020, 20:59 IST
ಮುಸ್ತಾಫಾ
ಮುಸ್ತಾಫಾ   

ಬೆಂಗಳೂರು: ಕೊರೊನಾ ಸೋಂಕು ತಗುಲಿದ್ದ ಬಿಬಿಎಂಪಿ ಮತ್ತೊಬ್ಬ ನೌಕರ ಮೃತಪಟ್ಟಿದ್ದಾರೆ.

ತೆರಿಗೆ ಅಧೀಕ್ಷಕರಾಗಿದ್ದ ಮುಸ್ತಾಫಾ (52) ಅವರು ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದು, ಶನಿವಾರ ಅಂತ್ಯಕ್ರಿಯೆ ನೆರವೇರಿತು.

‘ಕೊರೊನಾ ಸೊಂಕಿನಿಂದ ಮೃತಪಟ್ಟ ಪಾಲಿಕೆ ನೌಕರರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಈ ಹಿಂದೆ ಇದೇ ಸೋಂಕಿನಿಂದ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ಪರಿಹಾರ ಮೊತ್ತ ಇನ್ನೂ ಬಿಡುಗಡೆಯಾಗಿಲ್ಲ’ ಎಂದು ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಅಮೃತ್ ಹೇಳಿದರು.

ADVERTISEMENT

‘ಪಾಲಿಕೆಯ ಮತ್ತೊಬ್ಬ ಸಿಬ್ಬಂದಿಗೆ ಶನಿವಾರ ಸೋಂಕು ತಗುಲಿದೆ. ಈ ವಿಷಯ ತಿಳಿದು ಆಘಾತಕ್ಕೆ ಒಳಗಾದ ಅವರಿಗೆ ಮೆದುಳು ನಿಷ್ಕ್ರಿಯಗೊಂಡಿದೆ. ಐಸಿಯು ಸೌಲಭ್ಯ ಇರುವ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಅವರ ಕುಟುಂಬದವರು ಪರದಾಡುತ್ತಿದ್ದಾರೆ’ ಎಂದು ಅಮೃತ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.