ADVERTISEMENT

ಇ– ಆಸ್ತಿ ತಂತ್ರಾಂಶ: ಮತ್ತೆ 30 ವಾರ್ಡ್‌ಗಳಿಗೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 16:57 IST
Last Updated 18 ನವೆಂಬರ್ 2021, 16:57 IST
   

ಬೆಂಗಳೂರು: ಆಸ್ತಿಯ ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದ ಸೇವೆಗಳಿಗೆ ಇ– ಆಸ್ತಿ ತಂತ್ರಾಂಶ ಬಳಕೆಯನ್ನು ಬಿಬಿಎಂಪಿಯು ಎಂಟು ಉಪವಿಭಾಗಗಳ 30 ವಾರ್ಡ್‌ಗಳಿಗೆ ಗುರುವಾರದಿಂದ ವಿಸ್ತರಣೆ ಮಾಡಿದೆ.

ಇನ್ನು ಮುಂದೆ ಈ 30 ವಾರ್ಡ್‌ಗಳಲ್ಲೂ ಸಾರ್ವಜನಿಕರು ಆಸ್ತಿಗಳಿಗೆ ಸಂಬಂಧಿಸಿದ ಕೈಬರಹದ ಸಹಿ ಇರುವ ದಾಖಲೆ ಪತ್ರಗಳನ್ನು ಪಡೆಯಬಾರದು ಎಂದು ಬಿಬಿಎಂಪಿ ಹೇಳಿದೆ. ಸಕಾಲ ಮೂಲಕ ಸ್ವೀಕರಿಸಿದ ಅರ್ಜಿಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಪಾಲಿಕೆಯ ಕಂದಾಯ ವಿಭಾಗವು ಕ೦ದಾಯ ಇಲಾಖೆಯ ಸೇವೆಗಳನ್ನು ಸರಳೀಕರಣಗೊಳಿಸಿ ತ್ವರಿತವಾಗಿ ವಿಲೇವಾರಿ
ಮಾಡುವ ಉದ್ದೇಶದಿ೦ದ ಇ-ಆಸ್ತಿ ತ೦ತ್ರಾ೦ಶ ಬಳಕೆಯನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಿದೆ. ಶಾಂತಿನಗರ ಉಪವಿಭಾಗದ ಶಾಂತಲಾನಗರ, ನೀಲಸಂದ್ರ, ಶಾಂತಿನಗರ ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯಕ್ರಮ ಜಾರಿಗೊಳಿಸಲಾಗಿತ್ತು.

ADVERTISEMENT

ಎರಡನೇ ಹಂತದಲ್ಲಿ ದೊಮ್ಮಲೂರು ಉಪ ವಿಭಾಗದ ಜೋಗುಪಾಳ್ಯ, ದೊಮ್ಮಲೂರು, ಅಗರ, ವನ್ನಾರ್‌ಪೇಟೆ ವಾರ್ಡ್‌ಗಳಲ್ಲಿ, ಸಿ.ವಿ.ರಾಮನ್‌ ನಗರ ಉಪವಿಭಾಗದ ಬೆನ್ನಿಗಾನಹಳ್ಳಿ, ಸಿ.ವಿ.ರಾಮನ್‌ ನಗರ, ಹೊಸ ತಿಪ್ಪಸಂದ್ರ, ಸರ್ವಜ್ಞನಗರ ವಾರ್ಡ್‌ಗಳಲ್ಲಿ ಮತ್ತು ಜೀವನ್‌ಬಿಮಾ ನಗರ ಉಪವಿಭಾಗದ ಹೊಯ್ಸಳ ನಗರ, ಜೀವನ್‌ ಬಿಮಾನಗರ ಹಾಗೂ ಕೋನೇನ ಅಗ್ರಹಾರ ವಾರ್ಡ್‌ಗಳಿಗೆ ಅ.8ರಿಂದ ವಿಸ್ತರಿಸಲಾಗಿತ್ತು.

ಇ–ಆಸ್ತಿ ತಂತ್ರಾಂಶ ಬಳಕೆ ಜಾರಿಯಾದ ವಾರ್ಡ್‌ಗಳು

ಉಪವಿಭಾಗ; ವಾರ್ಡ್‌ಗಳು (ಸಂಖ್ಯೆ)

ಜೆ.ಸಿ.ನಗರ; ಗಂಗೇನಹಳ್ಳಿ (34), ಜೆ.ಸಿ.ನಗರ (46), ಮನೋರಾಯನಪಾಳ್ಯ (33), ವಿ–ನಾಗೇನಹಳ್ಳಿ (22)

ಹೆಬ್ಬಾಳ; ಗಂಗಾನಗರ (20), ಹೆಬ್ಬಾಳ (21), ರಾಧಾಕೃಷ್ಣ ದೇವಸ್ಥಾನ (18), ಸಂಜಯನಗರ (19)

ಶಿವಾಜಿನಗರ; ಭಾರತಿನಗರ (91), ಶಿವಾಜಿನಗರ (92), ಹಲಸೂರು (90)

ವಸಂತನಗರ; ಜಯಮಹಲ್‌ (63), ರಾಮಸ್ವಾಮಿಪಾಳ್ಯ (62), ಸಂಪಂಗಿರಾಮನಗರ (110), ವಸ೦ತ್‌ ನಗರ (93)

ಪುಲಿಕೇಶಿನಗರ; ದೇವರಜೀವನಹಳ್ಳಿ (47), ಪುಲಿಕೇಶಿನಗರ (78), ಎಸ್‌.ಕೆ.ಗಾರ್ಡನ್‌ (61)

ಕೆ.ಜಿ.ಹಳ್ಳಿ; ಕಾವಲ್‌ ಬೈರಸ೦ದ್ರ (32), ಕುಶಾಲನಗರ (31),ಮುನೇಶ್ವರನಗರ (48), ಸಗಾಯಪುರ (60)
ಮಾರುತಿಸೇವಾನಗರ; ಬಾಣಸವಾಡಿ (27), ಕಮ್ಮನಹಳ್ಳಿ (28), ಲಿಂಗರಾಜಪುರ (49) ಮಾರುತಿ ಸೇವಾನಗರ (59)

ಎಚ್‌ಬಿಆರ್‌ ಲೇಔಟ್‌;ಎಚ್‌ಬಿಆರ್‌ ಲೇಔಟ್‌ (24), ಕಾಚರಕನ ಹಳ್ಳಿ (29), ಕಾಡುಗೊ೦ಡನಹಳ್ಳಿ (30), ನಾಗವಾರ (23)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.