ADVERTISEMENT

ದಕ್ಷಿಣ ವಲಯದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಇಂದು: BBMP ವಲಯ ಆಯುಕ್ತ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 0:41 IST
Last Updated 11 ಜುಲೈ 2025, 0:41 IST
<div class="paragraphs"><p>BBMP </p></div>

BBMP

   

ಬೆಂಗಳೂರು: ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಜುಲೈ 11ರಂದು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಚರಣೆ ನಡೆಸಲಾಗುತ್ತದೆ ಎಂದು ಬಿಬಿಎಂಪಿ ವಲಯ ಆಯುಕ್ತ ದಿಗ್ವಿಜಯ್ ಬೋಡ್ಕೆ ತಿಳಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತರ ನಿರ್ದೇಶನದಂತೆ ಪಾದಚಾರಿಗಳಿಗೆ ಅಡೆತಡೆಗಳಿಲ್ಲದ ಪಾದಚಾರಿ ಮಾರ್ಗವನ್ನು ಕಲ್ಪಿಸಲಾಗುತ್ತಿದೆ. ಪ್ರತಿ ತಿಂಗಳ ಒಂದನೇ ಮತ್ತು ಮೂರನೇ ಶನಿವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶುಕ್ರವಾರದಂದು ಒತ್ತುವರಿ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದರು.

ADVERTISEMENT

ಬಸವನಗುಡಿ ವಿಭಾಗದ ಕೆ.ಆರ್. ರಸ್ತೆಯಿಂದ ಈಸ್ಟ್ ಆಂಜನೇಯ ರಸ್ತೆ, ಬಿ.ಟಿ.ಎಂ ಲೇಔಟ್ ವಿಭಾಗದ ಲಸ್ಕರ್ ಹೊಸೂರು ರಸ್ತೆ 20ನೇ ಮುಖ್ಯ ರಸ್ತೆಯ ಫೋರಂ ಮಾಲ್‌ನಿಂದ 80 ಅಡಿ ರಸ್ತೆಯ ಒಳಾಂಗಣ ಕ್ರೀಡಾಂಗಣದವರೆಗೆ, ಚಿಕ್ಕಪೇಟೆ ವಿಭಾಗದ ಕನಕನಪಾಳ್ಯ ಜಯನಗರ 8ನೇ ಮುಖ್ಯರಸ್ತೆಯಿಂದ ಪಟ್ಟಾಲಮ್ಮ ಮುಖ್ಯ ರಸ್ತೆಯವರೆಗೆ, ಜಯನಗರ ವಿಭಾಗದ 4ನೇ 'ಟಿ' ಬ್ಲಾಕ್ ಜಯನಗರ 32ನೇ 'ಇ' ಅಡ್ಡರಸ್ತೆಯಿಂದ ಮಾರೇನಹಳ್ಳಿ ರಸ್ತೆವರೆಗೆ, ಪದ್ಮನಾಭನಗರ ವಿಭಾಗದ ಕದಿರೇನಹಳ್ಳಿ ಕೆಳಸೇತುವೆಯಿಂದ ಕತ್ತರಿಗುಪ್ಪೆ ಸಿಗ್ನಲ್‌ವರೆಗೆ, ವಿಜಯನಗರ ವಿಭಾಗದ ಕಾರ್ಡ್‌ ರಸ್ತೆಯ ಅತ್ತಿಗುಪ್ಪೆ ಪೆಟ್ರೋಲ್ ಬಂಕ್‌ನಿಂದ ಸ್ಕೈಲೇನ್ ಅರ್ಪಾಟ್‌ಮೆಂಟ್‌ವರೆಗೆ ಪಾದಚಾರಿ ಮಾರ್ಗದ ಒತ್ತುವರಿಯನ್ನು ಶುಕ್ರವಾರ ತೆರವುಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.