ADVERTISEMENT

ಬಿಬಿಎಂಪಿಗೆ ಮತ್ತೆ 66 ಸಾವಿರ ಕೋವಿಶೀಲ್ಡ್‌ ಪೂರೈಕೆ

​ಪ್ರಜಾವಾಣಿ ವಾರ್ತೆ
Published 13 ಮೇ 2021, 20:47 IST
Last Updated 13 ಮೇ 2021, 20:47 IST
ಕೋವಿಶೀಲ್ಡ್‌
ಕೋವಿಶೀಲ್ಡ್‌    

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್‌ ಪಡೆಯುವವರಿಗೆ ನೀಡುವ ಸಲುವಾಗಿ ಸರ್ಕಾರ 66 ಸಾವಿರ ಕೋವಿಶೀಲ್ಡ್‌ ಲಸಿಕೆಯನ್ನು ಗುರುವಾರ ಪೂರೈಸಿದೆ. ಹಾಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಶುಕ್ರವಾರವೂ ಲಸಿಕೆ ಕಾರ್ಯಕ್ರಮ ಮುಂದುವರಿಯಲಿದೆ.

‘ಈ ಲಸಿಕೆಯನ್ನು ಈಗಾಗಲೇ ಮೊದಲ ಡೋಸ್‌ ಪಡೆದವರಿಗೆ ಮಾತ್ರ ನೀಡುತ್ತೇವೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದೇವೆ. 45 ವರ್ಷ ಮೇಲ್ಪಟ್ಟವರಿಗೂ ಸದ್ಯಕ್ಕೆ ಲಸಿಕೆಯ ಮೊದಲ ಡೋಸ್‌ ನೋಡುತ್ತಿಲ್ಲ. ಪೂರೈಕೆಯಾಗಿರುವ ಲಸಿಕೆಯನ್ನು ಎರಡನೇ ಡೋಸ್‌ ಪಡೆಯುವವರಿಗೆ ನೀಡುವುದಕ್ಕೆ ಮಾತ್ರ ಬಳಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆಯಲು ಮಾಡಿಸಿರುವ ನೋಂದಣಿಗಳನ್ನು ರದ್ದುಪಡಿಸಲಾಗಿದೆ. ಹಾಗಾಗಿ ಯಾರೂ ಮೊದಲ ಡೋಸ್‌ ಪಡೆಯುವ ಸಲುವಾಗಿ ಶುಕ್ರವಾರ ಲಸಿಕಾ ಕೇಂದ್ರಗಳಿಗೆ ಬರಬೇಡಿ’ ಎಂದು ಅವರು ವಿನಂತಿಸಿದರು.

ADVERTISEMENT

ಕೋವ್ಯಾಕ್ಸೀನ್‌ ಕೊರತೆ: ಕೋವ್ಯಾಕ್ಸೀನ್‌ ಕೊರತೆ ಮುಂದುವರಿದಿದ್ದು, ಇದರ ಮೊದಲ ಡೋಸ್‌ ಪಡೆದವರಿಗೆ ಎರಡೇ ಡೋಸ್‌ ನೀಡುವುದು ಸವಾಲಾಗಿ ಪರಿಣಮಿಸಿದೆ. ‘ಸ್ವಲ್ಪ ಪ್ರಮಾಣದಲ್ಲಿ ಕೋವ್ಯಾಕ್ಸೀನ್‌ ಪೂರೈಕೆ ಆಗಿದೆ. ಆದರೆ, ಬೇಡಿಕೆ ಪೂರೈಸಲು ಇದು ಏನೇನೂ ಸಾಲದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.