ADVERTISEMENT

ಬಿಬಿಎಂಪಿ ಆರೋಗ್ಯ ಸಹಾಯವಾಣಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 18:52 IST
Last Updated 23 ಏಪ್ರಿಲ್ 2020, 18:52 IST
   

ಬೆಂಗಳೂರು: ಕೋವಿಡ್–19 ಹಿನ್ನೆಲೆಯಲ್ಲಿ ನಗರದ ನಾಗರಿಕರಿಗೆ ಆರೋಗ್ಯ ಮಾಹಿತಿ ನೀಡುವ ಉದ್ದೇಶದಿಂದ ಬಿಬಿಎಂಪಿಯು ಆರೋಗ್ಯ ಸಹಾಯವಾಣಿ ತೆರೆದಿದೆ. 07447118949 ಸಂಖ್ಯೆಗೆ ಕರೆ ಮಾಡಿದರೆ, ಪಾಲಿಕೆಯ ವೈದ್ಯರು ಉಚಿತವಾಗಿ ಆರೋಗ್ಯ ಮಾಹಿತಿ ನೀಡಲಿದ್ದಾರೆ.

ಕೋವಿಡ್‌–19 ಬಗ್ಗೆ ಮಾತ್ರವಲ್ಲದೆ, ಬೇರೆ ಯಾವುದೇ ರೋಗದ ಕುರಿತೂ ನಾಗರಿಕರು ಪ್ರಶ್ನೆ ಕೇಳಬಹುದು. ಬ್ಲೂಮ್‌ಬರ್ಗ್‌ ಫಿಲಾಂಥ್ರಪಿ ಹಾಗೂ ವೈಟಲ್ ಸ್ಟ್ರಾಟಜೀಸ್‌ ಸಂಸ್ಥೆಗಳ ಸಹಯೋಗದಲ್ಲಿ ಆರಂಭಿಸಿರುವ ಈ ಸಹಾಯವಾಣಿಗೆ ಮೇಯರ್‌ ಗೌತಮ್‌ಕುಮಾರ್ ಗುರುವಾರ ಚಾಲನೆ ನೀಡಿದರು.

‘ಪಾಲಿಕೆಯ 42 ವೈದ್ಯರು ನಾಗರಿಕರಿಗೆ ಅಗತ್ಯ ಮಾಹಿತಿ ನೀಡಲಿದ್ದಾರೆ.ಬೆಳಿಗ್ಗೆ 8 ರಿಂದ 11, ಬೆಳಿಗ್ಗೆ 11 ರಿಂದ ಮಧ್ಯಾಹ್ನ 2, ಮಧ್ಯಾಹ್ನ 2 ರಿಂದ ಸಂಜೆ 5, ಸಂಜೆ 5 ರಿಂದ ರಾತ್ರಿ 8ರವರೆಗೆ ನಾಲ್ಕು ಪಾಳಿಗಳಲ್ಲಿ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ’ ಎಂದು ಮೇಯರ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.