ADVERTISEMENT

ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ತೆರವಿಗೆ ಬಿಬಿಎಂಪಿ ನೋಟಿಸ್‌

ವಸತಿಯಲ್ಲಿ ಮಳಿಗೆ: ಮುಚ್ಚಲು ಸೂಚನೆ

Published 26 ಡಿಸೆಂಬರ್ 2022, 6:10 IST
Last Updated 26 ಡಿಸೆಂಬರ್ 2022, 6:10 IST
   

ಬೆಂಗಳೂರು:ವಸತಿಪ್ರದೇಶಗಳಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಉಲ್ಲಂಘಿಸಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವವರ ಮೇಲೆಬಿಬಿಎಂಪಿಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.

ವಸತಿಕಟ್ಟಡ ನಕ್ಷೆ ಉಲ್ಲಂಘಿಸಿ, ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ಮಾಲೀಕರಿಗೆಬಿಬಿಎಂಪಿಯಆರೋಗ್ಯ ಘಟಕದಿಂದ ನೋಟಿಸ್‌ ಜಾರಿ ಮಾಡ ಲಾಗುತ್ತಿದೆ. ವಸತಿಗೆ ಮೀಸಲಾಗಿರುವ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ.ಹೀಗಾಗಿ ಆ ಚಟುವಟಿಕೆಗಳನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ವಸತಿಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ಕಟ್ಟಡಗಳ ಒಟ್ಟಾರೆ ಸಂಖ್ಯೆಬಿಬಿಎಂಪಿಯಲ್ಲಿ ಲಭ್ಯವಿಲ್ಲ. ಹೀಗಾಗಿ,ಎಂಟೂವಲಯದಲ್ಲಿ ವಲಯ ಆರೋಗ್ಯ ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿ ನೋಟಿಸ್‌ ಜಾರಿ ಮಾಡುತ್ತಿದ್ದಾರೆ. ಜ.10ರವರೆಗೆ ನೋಟಿಸ್‌ ನೀಡುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ನಂತರ, ವಾಣಿಜ್ಯ ಚಟುವಟಿಕೆ ಮುಚ್ಚುವ ಕಾರ್ಯಾಚರಣೆ ಆರಂಭಿಸಲಾಗುತ್ತದೆ ಎಂದುಬಿಬಿಎಂಪಿಆರೋಗ್ಯ ವಿಭಾಗದ ವಿಶೇಷ ಆಯುಕ್ತಡಾ. ತ್ರಿಲೋಕ್‌ ಚಂದ್ರ ತಿಳಿಸಿದರು.

ADVERTISEMENT

ನಗರ ವ್ಯಾಪ್ತಿಯವಸತಿಪ್ರದೇಶ ಗಳಲ್ಲಿ 40 ಅಡಿಗಿಂತ ಕಡಿಮೆ ಅಗಲದ ರಸ್ತೆಗಳಲ್ಲಿರುವ ಕಟ್ಟಡಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಯುತ್ತಿವೆ. ಈ ಪ್ರದೇಶ ದಲ್ಲಿ ಮಂಜೂರು ಪಡೆದಿರುವ ನಕ್ಷೆ ಯನ್ನು ಉಲ್ಲಂಘಿಸಿ ವಸತಿಯೇತರ ಚಟುವಟಿಕೆಗಳು ನಡೆಯುತ್ತಿರುವುದನ್ನು ಗಮನಿಸಲಾಗಿದೆ.ಹೀಗಾಗಿ, 2016ರಲ್ಲಿ ಈ ರೀತಿಯವಸತಿಚಟುವಟಿಕೆ ಹಾಗೂ ಉದ್ದಿಮೆ ಮುಚ್ಚಲು ಪ್ರಕಟಣೆಯನ್ನು ಬಿಬಿಎಂಪಿಹೊರಡಿಸಿತ್ತು.

ವಸತಿ ಕಟ್ಟಡದಲ್ಲಿ ವಾಣಿಜ್ಯ ಚಟುವಟಿಕೆ ಸ್ಥಗಿತಗೊಳಿಸಲು ಬಿಬಿಎಂಪಿ ನೀಡಿರುವ ನೋಟಿಸ್‌

ಪರಿಷ್ಕೃತ ಮಾಸ್ಟರ್‌ ಪ್ಲಾನ್‌ – 2015 ಮತ್ತು ಅದರಡಿ ರಚಿಸಲಾ ಗಿರುವ ವಲಯ ನಿಯಂತ್ರಣ ಮಾರ್ಗ ಸೂಚಿಗಳನ್ನು ವಸತಿಯೇತರ ಚಟುವಟಿಕೆಗಳು ಉಲ್ಲಂಘಿಸಿವೆ ಹೈಕೋರ್ಟ್‌ನಲ್ಲಿ ರಿಟ್‌ ಸಲ್ಲಿಸಲಾಗಿದ್ದು, ಇದುಕಾನೂನುಬಾಹಿರ ಚಟು ವಟಿಕೆ.ಇದರಿಂದನಗರದ ಸುಗಮ ಸಂಚಾರ, ವಸತಿಪ್ರದೇಶದಲ್ಲಿ ಜನರಿಗೆ ಅಡಚಣೆ, ಕಿರುಕುಳ ಉಂಟಾಗುತ್ತಿದೆ. ತಕ್ಷಣ ವಾಣಿಜ್ಯ ಚಟುವಟಿಕೆ ಮುಚ್ಚಬೇಕು. ಇಲ್ಲದಿದ್ದರೆ, ಚಟುವಟಿಕೆ ನಡೆಯುತ್ತಿ ರುವ ಕಟ್ಟಡಗಳನ್ನು ಪಾಲಿಕೆ ವತಿ ಯಿಂದ ಮುಚ್ಚಿ, ತಗುಲುವ ವೆಚ್ಚವನ್ನು ಕಟ್ಟಡ ಮಾಲೀಕರಿಂದ ವಸೂಲಿ ಮಾಡಲಾಗುತ್ತದೆ ಎಂದು ಬಿಬಿಎಂಪಿ ನೀಡಿರುವ ನೋಟಿಸ್‌ ನಲ್ಲಿ ಸೂಚಿಸಲಾಗಿದೆ.

‘ಹೈಕೋರ್ಟ್‌ ಆದೇಶದಂತೆ ಕ್ರಮ’
‘ಬಿಬಿಎಂಪಿ ವ್ಯಾಪ್ತಿಯವಸತಿಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವುದು ಕಾನೂನುಬಾಹಿರ. ಹೈಕೋರ್ಟ್‌ ಆದೇಶದಂತೆ ಕ್ರಮ ಕೈಗೊಳ್ಳಲು ಆರಂಭಿಸಿದ್ದೇವೆ. ನೋಟಿಸ್‌ ನೀಡಲಾಗುತ್ತಿದ್ದು, ಇದು ಸ್ಥಗಿತಗೊಳ್ಳದಿದ್ದರೆ ಕಾರ್ಯಾಚರಣೆ ಮಾಡುತ್ತೇವೆ. ವಾಣಿಜ್ಯ ಪ್ರದೇಶಗಳಲ್ಲಿರುವ ಕಟ್ಟಡಗಳಲ್ಲಿ ಪಾರ್ಕಿಂಗ್‌ ಹಾಗೂ ಇತರೆ ಮೀಸಲು ತೆರೆದ ಪ್ರದೇಶಗಳಲ್ಲೂ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವವರಮೇಲೂಕ್ರಮ ಕೈಗೊಳ್ಳಲಾಗುತ್ತದೆ’ ಎಂದುಬಿಬಿಎಂಪಿಆರೋಗ್ಯ ವಿಭಾಗದ ವಿಶೇಷ ಆಯುಕ್ತಡಾ. ತ್ರಿಲೋಕ್‌ ಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.