ADVERTISEMENT

ಬೆಂಗಳೂರು: 39 ಅನಧಿಕೃತ ಕಟ್ಟಡಗಳ ತೆರವಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 16:14 IST
Last Updated 7 ಜನವರಿ 2026, 16:14 IST
ಹೊರಮಾವು– ಅಗರ ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿರುವ ಮನೆಗಳಿಗೆ ನಗರ ಪಾಲಿಕೆ ಸಿಬ್ಬಂದಿ ನೋಟೀಸ್ ಜಾರಿ ಮಾಡಿದರು
ಹೊರಮಾವು– ಅಗರ ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿರುವ ಮನೆಗಳಿಗೆ ನಗರ ಪಾಲಿಕೆ ಸಿಬ್ಬಂದಿ ನೋಟೀಸ್ ಜಾರಿ ಮಾಡಿದರು   

ಕೆ.ಆರ್.ಪುರ: ಪೂರ್ವ ನಗರ ಪಾಲಿಕೆ ಕೆ.ಆರ್.ಪುರ ವಲಯದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳುವಂತೆ ಜಂಟಿ ಆಯುಕ್ತೆ ಸುಧಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಹೊರಮಾವು– ಅಗರ ಗ್ರಾಮದ ಸರ್ವೆ ನಂ. 11/1, 11/2, 11/3, 11/4, 11/5ರ ಸೈಟ್ ನಂ 2ರಲ್ಲಿ ಮಂಜೂರಾತಿ ನಕ್ಷೆ ಉಲ್ಲಂಘಿಸಿ, ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸುತ್ತಿರುವ ಹಾಗೂ ನಿರ್ಮಿಸಿರುವ 39 ಅನಧಿಕೃತ ಕಟ್ಟಡಗಳ ತೆರವಿಗೆ ಆದೇಶಿಸಿದರು.

ರಾಜಕಾಲುವೆ ಬಫರ್ ವಲಯದ ನಿಯಮಾವಳಿಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಹಾಗೂ ಜಿಬಿಎ ಬೈಲಾಗಳನ್ನು ಉಲ್ಲಂಘಿಸಿ ಸೆಟ್ ಬ್ಯಾಕ್ ಬಿಡದೆ ಕಟ್ಟಡ ನಿರ್ಮಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅನಧಿಕೃತ ಕಟ್ಟಡ ಮತ್ತು ಕಟ್ಟಡದ ಹೆಚ್ಚುವರಿ ಅಂತಸ್ತುಗಳು ಕಟ್ಟಡದ ಉಲ್ಲಂಘನೆ ಭಾಗವನ್ನು ಕಟ್ಟಡದ ಮಾಲೀಕರು ತರೆವುಗೊಳಿಸಬೇಕು. ಇಲ್ಲದಿದ್ದರೆ ಜಿಬಿಎ ಕಾಯ್ದೆ 2024ರ ಕಲಂ 244(2)ಅಡಿಯಲ್ಲಿ ಪಾಲಿಕೆಯಿಂದಲೇ ತೆರವುಗೊಳಿಸಿ ಈ ಸಂಬಂಧ ತಗಲುವ ವೆಚ್ಚವನ್ನು ವಸೂಲಿ ಮಾಡಲಾಗುವುದು ಎಂದು ಒತ್ತುವರಿದಾರರಿಗೆ ನೋಟಿಸ್‌ ಜಾರಿ ಮಾಡಿದರು.

ADVERTISEMENT

ತೆರವು ಕಾರ್ಯಚರಣೆ ವೇಳೆ ಪಾಲಿಕೆ ಅಧಿಕಾರಿಗಳಿಗೆ ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.