ಬಿಬಿಎಂಪಿ
ಬೆಂಗಳೂರು: ಆಸ್ತಿ ತೆರಿಗೆಯನ್ನು ಅತಿಹೆಚ್ಚು ಬಾಕಿ ಉಳಿಸಿಕೊಂಡಿರುವ 830 ವಾಣಿಜ್ಯ ಕಟ್ಟಡಗಳಿಗೆ ಬಿಬಿಎಂಪಿ ಸಿಬ್ಬಂದಿ ಬೀಗಮುದ್ರೆ ಹಾಕಿದ್ದಾರೆ.
ಜನವರಿ 1ರಿಂದ 9ರವರೆಗೆ ಕಾರ್ಯಾಚರಣೆ ನಡೆಸಿರುವ ಎಂಟು ವಲಯದ ಕಂದಾಯ ವಿಭಾಗದ ಅಧಿಕಾರಿಗಳು ಮಳಿಗೆ, ಕಟ್ಟಡಗಳಿಗೆ ಬೀಗಮುದ್ರೆ ಹಾಕಿ, ಆಸ್ತಿ ತೆರಿಗೆ ಪಾವತಿಸಲು ತಾಕೀತುಮಾಡಿದ್ದಾರೆ.
‘ಆಸ್ತಿ ತೆರಿಗೆ ಪಾವತಿಗೆ ಸಾಕಷ್ಟು ಸಮಯ ನೀಡಲಾಗಿದೆ. ವಾಣಿಜ್ಯ ಕಟ್ಟಡಗಳ ಮಾಲೀಕರಲ್ಲಿ ಹಲವರು ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಕಾನೂನು ಕ್ರಮಜರುಗಿಸಲಾಗುತ್ತಿದೆ. ಇದೀಗ ಬೀಗಮುದ್ರೆ ಹಾಕಿದ್ದು, ಗಡುವು ನೀಡಲಾಗಿದೆ. ಅದನ್ನೂ ಮೀರಿ ತೆರಿಗೆ ಪಾವತಿಸದಿದ್ದರೆ ಹರಾಜು ಪ್ರಕ್ರಿಯೆ ನಡೆಯಲಿದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.