ADVERTISEMENT

ಯಲಹಂಕ: 42 ಬಗೆಯ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 21:13 IST
Last Updated 28 ಆಗಸ್ಟ್ 2022, 21:13 IST
ಬೆಟ್ಟಹಲಸೂರು ಗ್ರಾಮದಲ್ಲಿ ನಿರ್ಮಿಸಿರುವ ಸಮಗ್ರ ತ್ಯಾಜ್ಯ ನಿರ್ವಹಣಾ ಘಟಕವನ್ನು ಶಾಸಕ ಕೃಷ್ಣಬೈರೇಗೌಡ ಉದ್ಘಾಟಿಸಿದರು. ಬಿ.ಎಂ.ನಾಗೇಶ್ ಮೊದಲಾದವರು ಹಾಜರಿದ್ದರು
ಬೆಟ್ಟಹಲಸೂರು ಗ್ರಾಮದಲ್ಲಿ ನಿರ್ಮಿಸಿರುವ ಸಮಗ್ರ ತ್ಯಾಜ್ಯ ನಿರ್ವಹಣಾ ಘಟಕವನ್ನು ಶಾಸಕ ಕೃಷ್ಣಬೈರೇಗೌಡ ಉದ್ಘಾಟಿಸಿದರು. ಬಿ.ಎಂ.ನಾಗೇಶ್ ಮೊದಲಾದವರು ಹಾಜರಿದ್ದರು   

ಯಲಹಂಕ: ಬೆಟ್ಟಹಲಸೂರು ಪಂಚಾಯಿತಿ ವ್ಯಾಪ್ತಿಯಲ್ಲಿ ₹ 1.75 ಕೊಟಿ ವೆಚ್ಚದಲ್ಲಿ ನಿರ್ಮಿಸಿರುವ ‘ಇಕೋ ಹಬ್’ ಸಮಗ್ರ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಚಾಲನೆ ನೀಡಲಾಯಿತು.

ದಿ ಅನನೈಮಸ್ ಇಂಡಿಯನ್ ಚಾರಿಟಬಲ್ ಟ್ರಸ್ಟ್ ಮತ್ತು ಬೆಟ್ಟ ಹಲಸೂರು ಪಂಚಾಯಿತಿ ಸಹಭಾಗಿತ್ವದಲ್ಲಿ ಎಂಬೆಸ್ಸಿ ರಿಯಲ್ ಎಸ್ಟೇಟ್ ಸಂಸ್ಥೆಯ (ಆರ್.ಇ.ಐ.ಟಿ) ಧನಸಹಾಯದೊಂದಿಗೆ ‘ಇಕೋ ಗ್ರಾಮ್’ ಯೋಜನೆ ಅಡಿಯಲ್ಲಿ 2 ಎಕರೆ ಪ್ರದೇಶದಲ್ಲಿ ಈ ಘಟಕ ನಿರ್ಮಿಸಲಾಗಿದೆ.

ಘಟಕದಲ್ಲಿ ಒಣ- ಹಸಿ ಕಸ, ಔಷಧಿ, ಪ್ಲಾಸ್ಟಿಕ್, ಪೇಪರ್, ಲೋಹ, ಗಾಜು ಸೇರಿದಂತೆ ಪ್ರತಿದಿನ 42 ಬಗೆಯ ಸುಮಾರು 3 ಟನ್‌ನಷ್ಟು ಒಣತ್ಯಾಜ್ಯ ಬೇರ್ಪಡಿಸಲು ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಶಾಸಕ ಕೃಷ್ಣಬೈರೇಗೌಡ ಮಾತ ನಾಡಿ, ಹಳ್ಳಿಗಳಲ್ಲಿ ಕಸ ನಿರ್ವಹಣೆಯು ದೊಡ್ಡ ಸವಾಲಾಗಿ ಪರಿಣಮಿಸಿರುವ ಈ ಸಂದರ್ಭದಲ್ಲಿ ಇಕೋ ಗ್ರಾಮ್ ಸಂಸ್ಥೆಯವರು ಪಂಚಾಯಿತಿಯ ಸಹ ಭಾಗಿತ್ವದಲ್ಲಿ ಜನರಿಗೆ ಕಸನಿರ್ವ ಹಣೆ ಬಗ್ಗೆ ಅರಿವು ಮೂಡಿಸಿ, ಮನೆಗಳಲ್ಲೆ ಕಸವನ್ನು ಬೇರ್ಪಡಿಸಿ, ನೀಡುವ ರೀತಿಯಲ್ಲಿ ಮನವೊಲಿಸಿರುವುದು ಶ್ಲಾಘನೀಯ ಕಾರ್ಯ ಎಂದರು.

ಪಂಚಾಯಿತಿ ಅಧ್ಯಕ್ಷ ಬಿ.ಎಂ.ನಾಗೇಶ್, ಪಿಡಿಒ ನಾಗರಾಜ್, ಕೃಷಿಕ ಸಮಾಜದ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಬಿ.ಕೆ.ಮಂಜುನಾಥಗೌಡ, ಪಂಚಾಯಿತಿ ಸದಸ್ಯರಾದ ಬಿ.ಆರ್.ಪ್ರವೀಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.