ADVERTISEMENT

ಎರಡು ವರ್ಷಗಳ ದಾಖಲೆ ಆನ್‌ಲೈನ್‌ನಲ್ಲಿ ಲಭ್ಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 21:44 IST
Last Updated 27 ನವೆಂಬರ್ 2020, 21:44 IST

ಬೆಂಗಳೂರು: ಸ್ವಾಧೀನಾನುಭವ ಪತ್ರ ಸೇರಿದಂತೆ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬಿಬಿಎಂಪಿಯು ಇದೇ ಮೊದಲ ಬಾರಿಗೆ ಪಾಲಿಕೆಯ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿದೆ. 2019–20 ಹಾಗೂ 2020–21 ಸಾಲಿನ ಈವರೆಗಿನ ದಾಖಲೆಗಳನ್ನು ನಾಗರಿಕರು ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ.

ಆಸ್ತಿ ಖಾತಾ ನೋಂದಣಿ, ವರ್ಗಾವಣೆ ಮತ್ತು ವಿಭಜನೆ ಸೇರಿದಂತೆ ಹಲವು ಸೇವೆಗಳನ್ನು ಪಡೆಯಬಹುದಾದ ಇ–ಆಸ್ತಿ ತಂತ್ರಾಂಶವನ್ನು ಪಾಲಿಕೆ ಅಭಿವೃದ್ಧಿ ಪಡಿಸಿದೆ. ಮನೆಯಲ್ಲಿಯೇ ಕುಳಿತೇ ತ್ವರಿತವಾಗಿ ಮತ್ತು ಸುಲಭವಾಗಿ ಈ ಸೇವೆಗಳನ್ನು ಸಾರ್ವಜನಿಕರು ಪಡೆಯಬಹುದಾಗಿದೆ.

ಶಾಂತಲಾನಗರ, ನೀಲಸಂದ್ರ ಮತ್ತು ಶಾಂತಿನಗರ ವಾರ್ಡ್‌ಗಳ ಮಾಹಿತಿ ಈಗ ವೆಬ್‌ಸೈಟ್‌ನಲ್ಲಿದೆ. ಬಿಬಿಎಂಪಿಯ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳಲ್ಲಿನ 100 ವಾರ್ಡ್‌ಗಳಲ್ಲಿ ಪ್ರಾರಂಭಿಕವಾಗಿ ಈ ಇ–ಆಸ್ತಿ ತಂತ್ರಾಂಶ ವ್ಯವಸ್ಥೆ ಜಾರಿಗೆ ತರಲಾಗಿದೆ. ಉಳಿದ ವಾರ್ಡ್‌ಗಳಲ್ಲಿ ಮುಂದಿನ ಆರು ತಿಂಗ ಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗುತ್ತದೆ.

ADVERTISEMENT

ಆಸ್ತಿ ನಿರ್ವಹಣೆಗೆ ಸಂಬಂಧಿಸಿದಂತೆ ನಾಗರಿಕರು ಈ ತಂತ್ರಾಂಶ ಬಳಸಿಕೊಳ್ಳಬಹುದು. ಲೋಪ–ದೋಷಗಳು ಕಂಡುಬಂದರೆ, ಪ್ರತಿಕ್ರಿಯೆ ದಾಖಲಿಸ ಬಹುದು. ಖಾತಾ ಪಡೆಯುವ, ಕಟ್ಟಡದ ನಕ್ಷೆ ಮಂಜೂರಾತಿ, ಉದ್ದಿಮೆ ಪರವಾನಗಿ ಸೇರಿದಂತೆ ಇನ್ನಿತರೆ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲವೂ ಈಗ ಆನ್‌ಲೈನ್‌ನಲ್ಲಿಯೇ ದೊರೆಯಲಿದೆ.

ಮಾಹಿತಿಗೆ, https://bbmp.gov.in/townplanning.html ಈ ಲಿಂಕ್ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.