ADVERTISEMENT

ಬೆಂಗಳೂರಿನ ಜೆ.ಪಿ. ನಗರದಲ್ಲಿ ಬಿಡಿಎ ಕಾರ್ಯಾಚರಣೆ: ₹370 ಕೋಟಿ ಮೌಲ್ಯದ ಆಸ್ತಿ ವಶ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 13:54 IST
Last Updated 18 ಸೆಪ್ಟೆಂಬರ್ 2025, 13:54 IST
ಆಲಹಳ್ಳಿ ಗ್ರಾಮದಲ್ಲಿ ಅಕ್ರಮ ಕಟ್ಟಡಗಳನ್ನು ತೆರವು ಮಾಡಲಾಯಿತು. 
ಆಲಹಳ್ಳಿ ಗ್ರಾಮದಲ್ಲಿ ಅಕ್ರಮ ಕಟ್ಟಡಗಳನ್ನು ತೆರವು ಮಾಡಲಾಯಿತು.    

ಬೆಂಗಳೂರು: ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡ, ಶೇಡ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಎರಡು ದಿನಗಳಲ್ಲಿ ಒಟ್ಟು ₹370 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ಆಲಹಳ್ಳಿ ಗ್ರಾಮದ ಸರ್ವೆ ನಂ. 6/2ರಲ್ಲಿ 1 ಎಕರೆ 3 ಗುಂಟೆ, 9/2ರಲ್ಲಿ 1 ಎಕರೆ 7 ಗುಂಟೆ, 10/3ರಲ್ಲಿ 2 ಎಕರೆ 20 ಗುಂಟೆ, 11/1ರಲ್ಲಿ 24 ಗುಂಟೆ, 15/1ರಲ್ಲಿ 36 ಗುಂಟೆ, 15/2ರಲ್ಲಿ 37 ಗುಂಟೆ, 15/3ರಲ್ಲಿ 1 ಎಕರೆ, 15/4ರಲ್ಲಿ 1 ಎಕರೆ-9 ಗುಂಟೆ, 15/5ರಲ್ಲಿ 1ಎಕರೆ-2 ಗುಂಟೆ, 15/6ರಲ್ಲಿ 2 ಗುಂಟೆ, 15/7ರಲ್ಲಿ 2 ಗುಂಟೆ ಸೇರಿ 10 ಎಕರೆ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಕಟ್ಟಡಗಳು ಹಾಗೂ ಶೆಡ್‌ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ ವಶಕ್ಕೆ ಪಡೆದಿದೆ. ಇವುಗಳ ಒಟ್ಟು ಮೌಲ್ಯ ₹305 ಕೋಟಿ ಎಂದು ಅಂದಾಜಿಸಲಾಗಿದೆ. 

ಅದೇ ರೀತಿ ಆಲಹಳ್ಳಿ ಗ್ರಾಮದ ಸರ್ವೆ ನಂ. 82/1, 82/2, 82/3ರ 2.5 ಎಕರೆ ಪ್ರದೇಶದಲ್ಲಿ ಗುರುವಾರ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ, ಸುಮಾರು ₹65 ಕೋಟಿ ಬೆಲೆ ಬಾಳುವ ಜಾಗವನ್ನು ವಶಪಡಿಸಿಕೊಂಡಿದೆ.

ADVERTISEMENT

ಬಿಡಿಎ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರು, ಕಾರ್ಯಪಾಲಕ ಎಂಜಿನಿಯರ್ ಅಶೋಕ್ ಬಾಗಿ, , ದಕ್ಷಿಣ ವಿಭಾಗ ಹಾಗೂ ನಾಡಪ್ರಭು ಕೆಂಪೇಗೌಡ ಬಡಾವಣೆ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ರಾಜ್ಯ ಮೀಸಲು ಪೊಲೀಸ್ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.