
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಲವು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿನ 83 ನಿವೇಶನಗಳನ್ನು ಇ-ಹರಾಜು ಮೂಲಕ ಮಾರಾಟ ಮಾಡಲಿದೆ.
ವಸತಿ, ವಾಣಿಜ್ಯ ಮತ್ತು ಮಧ್ಯಂತರ ನಿವೇಶನಗಳ ಇ –ಹರಾಜು ಪ್ರಕ್ರಿಯೆ ಜನವರಿ 27ರಿಂದ ಆರಂಭವಾಗಲಿದ್ದು, ಹಾಲಿ ಯಾವ ಸ್ಥಿತಿಯಲ್ಲಿ ಇವೆಯೋ ಹಾಗೆಯೇ ನಿವೇಶನಗಳನ್ನು ಮಾರಾಟ ಮಾಡಲಾಗುತ್ತದೆ. ಆಸಕ್ತರು ಫೆಬ್ರವರಿ 13ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಫೆಬ್ರವರಿ 17 ಮತ್ತು 18ರಂದು ಹರಾಜು ನಡೆಯಲಿದೆ.
ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ನಿವೇಶನಗಳು ಇರುವ ಸ್ಥಳಗಳ ವಿವರಗಳನ್ನು ಅವುಗಳ ಭೌಗೋಳಿಕ ಸಂಯೋಜನೆಗಳ ಜೊತೆಗೆ ಪ್ರಕಟಿಸಿದೆ. ಆರಂಭಿಕ ಬಿಡ್ ದರ ₹500 ಪ್ರತಿ ಚದರ ಮೀಟರ್‌ನಿಂದ ಇರಲಿದೆ. ಅರ್ಕಾವತಿ ಬಡಾವಣೆ, ಬನಶಂಕರಿ 6ನೇ ಹಂತ, ಜೆ.ಪಿ ನಗರ 9ನೇ ಹಂತ ಮತ್ತು ಅಂಜನಾಪುರ ಬಡಾವಣೆಗಳಲ್ಲಿ ನಿವೇಶನಗಳನ್ನು ಮಾರಾಟ ಮಾಡಲಾಗುತ್ತದೆ.
ಪ್ರಾಧಿಕಾರವು ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಇ–ಹರಾಜು ನಡೆಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.