
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಣಿಮಿಣಿಕೆ ಮತ್ತು ಹುಣ್ಣಿಗೆರೆಯ ವಸತಿ ಸಮುಚ್ಚಯದಲ್ಲಿ ಎರಡು ದಿನ ಆಯೋಜಿಸಿದ್ದ ಮೇಳಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, 25 ಫ್ಲ್ಯಾಟ್‌ಗಳು ಮತ್ತು 25 ಪ್ರೀಮಿಯಂ ವಿಲ್ಲಾಗಳು ಮಾರಾಟವಾಗಿವೆ.
ಮೇಳದಲ್ಲಿ 300ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ಫ್ಲ್ಯಾಟ್ ಹಾಗೂ ಪ್ರೀಮಿಯಂ ವಿಲ್ಲಾಗಳನ್ನು ಖರೀದಿಸಿದರು. ಪ್ರಾರಂಭಿಕ ಠೇವಣಿ ಪಾವತಿಸಿದ ಗ್ರಾಹಕರಿಗೆ ಸ್ಥಳದಲ್ಲಿಯೇ ಹಂಚಿಕೆ ಪತ್ರ ವಿತರಿಸಲಾಯಿತು.
ಏಕಕಾಲದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ವಾಹನ ವ್ಯವಸ್ಥೆ ಮಾಡಲಾಗಿತ್ತು. ಸ್ವಯಂ ಸೇವಕರು ಫ್ಲ್ಯಾಟ್‌ಗಳ ಬಗ್ಗೆ ಮಾಹಿತಿ ನೀಡಿದರು. ₹1 ಲಕ್ಷ ಪಾವತಿಸಿ ಫ್ಲ್ಯಾಟ್‌ಗಳನ್ನು ಕಾಯ್ದಿರಿಸಿ, ಉಳಿದ ಪ್ರಾರಂಭಿಕ ಠೇವಣಿಯನ್ನು ಏಳು ದಿನಗಳೊಳಗೆ ಪಾವತಿಸಿದ್ದಲ್ಲಿ ಹಂಚಿಕೆ ಪತ್ರವನ್ನು ನೀಡಲಾಗುವುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.
ಕೆನರಾ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಎಚ್.ಡಿ.ಎಫ್.ಸಿ. ಬ್ಯಾಂಕ್‌ಗಳ ಪ್ರತಿನಿಧಿಗಳು ಸ್ಥಳದಲ್ಲಿ ಹಾಜರಿದ್ದರು.
ಬಿಡಿಎ ಆರ್ಥಿಕ ಸದಸ್ಯ ಎ. ಲೋಕೇಶ್, ಎಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸಮೂರ್ತಿ, ಉಪ ಕಾರ್ಯದರ್ಶಿ ಎಂ.ಎಸ್. ಜ್ಞಾನೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಇಂಬವಳ್ಳಿ, ಕುಮಾರ್, ಭುವನೇಶ್ವರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.