
ದಾಬಸ್ ಪೇಟೆ: ರೈತರ ತೋಟದ ರಕ್ಷಣೆಗೆ ಹಾಕಿದ್ದ ಮುಳ್ಳು ತಂತಿ ಬೇಲಿಗೆ ಸಿಲುಕಿಕೊಂಡ ಕರಡಿಯನ್ನು ನೆಲಮಂಗಲ ತಾಲ್ಲೂಕು ವಲಯ ಅರಣ್ಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಶಿವಗಂಗೆ ತಪ್ಪಲಿಗೆ ಹೊಂದಿಕೊಂಡ ಕಂಬಾಳು ಗೊಲ್ಲರಹಟ್ಟಿ ರೈತರಾದ ಅಣ್ಣಯ್ಯಪ್ಪ ಹಾಗೂ ಚಿಟ್ಟಿಬಾಬು ಅವರ ತೋಟದ ತಂತಿ ಬೇಲಿಗೆ ಸಿಲುಕಿದ್ದ ಕರಡಿ ಬಿಡಿಸಿಕೊಳ್ಳಲು ಆಗದೆ ಇಡೀ ರಾತ್ರಿ ನರಳಿದೆ.
ಕರಡಿ ತಂತಿ ಬೇಲಿಗೆ ಸಿಲುಕಿರುವುದನ್ನು ಕಂಡ ಸಾರ್ವಜನಿಕರು ಅರಣ್ಯಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಕರಡಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದರು.
ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಸೈಯದ್ ನಿಜಾಮುದ್ದೀನ್, ದೊಡ್ಡಬಳ್ಳಾಪುರ ವಲಯ ಅರಣ್ಯ ಅಧಿಕಾರಿ ಮಂಜುನಾಥ್, ನೆಲಮಂಗಲ ಉಪವಲಯ ಅರಣ್ಯ ಅಧಿಕಾರಿ ಮಲ್ಲಿಕಾರ್ಜುನ್, ಪ್ರವೀಣ್ ಕುಮಾರ್ ಕೆ, ರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.