ಕಲ್ಪನಾ
ಬೆಂಗಳೂರು: 'ಪ್ರಜಾವಾಣಿ' ಪತ್ರಿಕೆಯ ಬೆಂಗಳೂರು ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕಲಾವಿದ ಶಶಿಕಿರಣ ದೇಸಾಯಿ ಅವರ ಪತ್ನಿ ಕಲ್ಪನಾ (38) ಅವರು (ಹಾಸನದ ಕಲಾವಿದ ಬಿ.ಎಸ್.ದೇಸಾಯಿ ಅವರ ಸೊಸೆ) ನಗರದ ನಂದಿನಿ ಲೇಔಟ್ ನಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಪೀಣ್ಯದ ಆದರ್ಶ್ ಎಲೆಕ್ಟ್ರಾನಿಕ್ಸ್‌ನಲ್ಲಿ ಕಲ್ಪನಾ ಅವರು ಕೆಲಸ ಮಾಡುತ್ತಿದ್ದರು.
ಮಗಳು ಡಿಂಪನಾ(4)ಳನ್ನು ಸೋಮವಾರ ಶಾಲೆಗೆ ಹೊರಡಿಸಿ ಕಲ್ಪನಾ ಅವರು ಕಚೇರಿಗೆ ಹೊರಟಿದ್ದರು. ಮಾರ್ಗ ಮಧ್ಯದಲ್ಲಿ ಕಚೇರಿಯ ಸಹೋದ್ಯೋಗಿಯ ಬೈಕ್‌ನಲ್ಲಿ ಕಚೇರಿಯತ್ತ ಹೊರಟಿದ್ದರು. ಮಾರ್ಗದ ಮಧ್ಯದಲ್ಲಿ ವೇಗವಾಗಿ ಬಂದ ಲಾರಿ, ಬೈಕ್‌ಗೆ ಡಿಕ್ಕಿ ಹೊಡೆದಿದೆ. ಹೊಟ್ಟೆ ಹಾಗೂ ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿತ್ತು. ಕಲ್ಪನಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸವಾರನಿಗೆ ಗಾಯವಾಗಿದ್ದು, ಕಣ್ವ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಕಣ್ವ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಹಾಸನದ ಆಲೂರು ತಾಲ್ಲೂಕಿನ ಮಂಚೇನಹಳ್ಳಿಯಲ್ಲಿ ಮಂಗಳವಾರ ಬೆಳಿಗ್ಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.