ವಾಹನ ದಟ್ಟಣೆ
(ಸಂಗ್ರಹ ಚಿತ್ರ)
ಬೆಂಗಳೂರು: ಬಳ್ಳಾರಿ ರಸ್ತೆಯಲ್ಲಿರುವ ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೊ ಇಂಡಿಯಾ 2025ಕ್ಕೆ ಇಂದು (ಶುಕ್ರವಾರ) ಕೊನೆಯ ದಿನವಾಗಿದ್ದು, ಈ ಮಾರ್ಗದಲ್ಲಿ ವಿಪರೀತ ವಾಹನ ದಟ್ಟಣೆಯ ಆಗುವ ಸಾಧ್ಯತೆ ಇದೆ. ಶುಕ್ರವಾರ ಬೆಳಿಗ್ಗೆಯೇ ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.
ಬಳ್ಳಾರಿ, ಆಂಧ್ರಪ್ರದೇಶ, ದೇವನಹಳ್ಳಿಯಲ್ಲಿ ಇರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ದಟ್ಟಣೆಯ ಬಿಸಿ ತಟ್ಟುವ ಸಾಧ್ಯತೆ ಇದೆ.
ವೈಮಾನಿಕ ಪ್ರದರ್ಶನ ಹಾಗೂ ಪ್ರದರ್ಶನ ಮಳಿಗೆ ವೀಕ್ಷಣೆಗೆ ಶುಕ್ರವಾರ ಸಾರ್ವಜನಿಕರಿಗೆ ಅವಕಾಶವಿದೆ. ಹೀಗಾಗಿ, ದೊಡ್ಡ ಸಂಖ್ಯೆಯಲ್ಲಿ ವಾಯುನೆಲೆಯತ್ತ ಜನರು ತಮ್ಮ ವಾಹನಗಳಲ್ಲಿ ಧಾವಿಸುತ್ತಿದ್ದಾರೆ.
ಇದೇ ಮಾರ್ಗದ ಮೂಲಕ ದೂರದ ಊರುಗಳಿಗೆ ತೆರಳುವವರು ಬೆಂಗಳೂರು -ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ 44ರ ಬದಲು ಹೆಬ್ಬಾಳ- ಹೆಣ್ಣೂರು-ಬಾಗಲೂರು ಮಾರ್ಗ ಬಳಸುವಂತೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.