ಸಾಂದರ್ಭಿಕ ಚಿತ್ರ
ಬೆಂಗಳೂರು: ದೇವನಹಳ್ಳಿ ಹಾಗೂ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ, ₹ 86.50 ಲಕ್ಷ ಮೌಲ್ಯದ ಕೊಕೇನ್ ಜಪ್ತಿ ಮಾಡಿದ್ದಾರೆ.
‘ದೇವನಹಳ್ಳಿಯ ಪ್ರಸನ್ನಹಳ್ಳಿ ರಸ್ತೆಯಲ್ಲಿ ಇಬ್ಬರು ಆರೋಪಿಗಳು ಕೊಕೇನ್ ಮಾರುತ್ತಿದ್ದರು. ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ ₹ 80 ಲಕ್ಷ ಮೌಲ್ಯದ 850 ಗ್ರಾಂ ಕೊಕೇನ್, ಎರಡು ಮೊಬೈಲ್, ತೂಕದ ಯಂತ್ರ, ಬ್ಯಾಗ್ ಹಾಗೂ ಕೊಕೇನ್ ತುಂಬಲು ಬಳಸುವ ಪ್ಲ್ಯಾಸ್ಟಿಕ್ ಪೊಟ್ಟಣಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಇನ್ನೊಂದು ಪ್ರಕರಣದಲ್ಲಿ ತ್ಯಾಗರಾಜನಗರದ ಬಿಬಿಎಂಪಿ ಆಟದ ಮೈದಾನ ಬಳಿ ವಿದೇಶಿ ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ. ಈತ, ಕಾಲೇಜು ವಿದ್ಯಾರ್ಥಿಗಳಿಗೆ ಕೊಕೇನ್ ಮಾರುತ್ತಿದ್ದನೆಂದು ಗೊತ್ತಾಗಿದೆ. ಆರೋಪಿಯಿಂದ ₹ 6.50 ಲಕ್ಷ ಮೌಲ್ಯದ 81 ಕೊಕೇನ್ ಹಾಗೂ ₹ 2,200 ನಗದು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.