
‘ತಾರ’ ನಾಟಕ ಪ್ರದರ್ಶನ
ಬೆಂಗಳೂರು: ಅಭಿನಯ ತರಂಗ ತಂಡವು ಇದೇ 13ರಂದು ಸಂಜೆ 7.30ಕ್ಕೆ ರಂಗಶಂಕರದಲ್ಲಿ ‘ತಾರ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.
ಮಹೇಶ್ ದತ್ತಾನಿ ಅವರ ಈ ನಾಟಕವನ್ನು ರಾಘವೇಂದ್ರ ಜಿ. ಅವರು ಕನ್ನಡಕ್ಕೆ ಅನುವಾದಿಸಿ, ನಿರ್ದೇಶಿಸಿದ್ದಾರೆ. ಈ ನಾಟಕದ ಟಿಕೆಟ್‌ಗಳು ‘ಬುಕ್ ಮೈ ಶೋ’ದಲ್ಲಿ ಲಭ್ಯ.
****
‘ಸುರ್ ಸಂಧ್ಯಾ’ ಸಂಗೀತ
ಬೆಂಗಳೂರು: ಕ್ಯಾನ್ಸರ್‌ಪೀಡಿತ ಬಡ ರೋಗಿಗಳ ಚಿಕಿತ್ಸೆಗೆ ನೆರವಾಗಲು ಎಚ್‌ಸಿಜಿ ಫೌಂಡೇಷನ್ ಸಹಯೋಗದಲ್ಲಿ ಸಂಧ್ಯಾ ಎಸ್. ಕುಮಾರ್ ಅವರು ಇದೇ 14ರಂದು ಸಂಜೆ 6 ಗಂಟೆಯಿಂದ ಕೋಣನಕುಂಟೆಯ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ‘ಸುರ್ ಸಂಧ್ಯಾ’ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಬಾಲಿವುಡ್ ಗಾಯಕಿ ಕವಿತಾ ಕೃಷ್ಣಮೂರ್ತಿ ಪಾಲ್ಗೊಳ್ಳಲಿದ್ದಾರೆ. ಜನಪ್ರಿಯ ಹಳೆಯ ಚಿತ್ರಗೀತೆಗಳನ್ನು ಅವರು ಹಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ತಮ್ಮ ಸಂಗೀತ ಪಯಣವನ್ನೂ ಸ್ಮರಿಸಿಕೊಳ್ಳಲಿದ್ದು, ಅವರೊಂದಿಗೆ ಧ್ವನಿ ಕಲಾವಿದ ಹರೀಶ್ ಭಿಮಾನಿ ಸಂವಾದ ನಡೆಸಲಿದ್ದಾರೆ. ಮೂರು ಗಂಟೆಗೂ ಹೆಚ್ಚು ನಡೆಯುವ ಈ ಕಾರ್ಯಕ್ರಮದಲ್ಲಿ ಗಾಯಕರಾದ ನಾಗಚಂದ್ರಿಕಾ ಭಟ್, ಸಮನ್ವಿತಾ ಶರ್ಮಾ, ಶ್ರುತಿ ಭಿಡೆ, ಆರೋಹ್ ಶಂಕರ್ ಹಾಗೂ ಸುರೋಜಿತ್ ಗುಹಾ ಅವರು ಭಾಗವಹಿಸಲಿದ್ದು, ವಿವಿಧ ಚಿತ್ರಗೀತೆಗಳನ್ನು ಹಾಡುವ ಮೂಲಕ ರಂಜಿಸಲಿದ್ದಾರೆ.
ಈ ಕಾರ್ಯಕ್ರಮದಿಂದ ಸಂಗ್ರಹವಾದ ಹಣವನ್ನು ಎಚ್‌ಸಿಜಿ ಫೌಂಡೇಷನ್‌ಗೆ ಒದಗಿಸಿ, ಕ್ಯಾನ್ಸರ್‌ಪೀಡಿತ ಬಡ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ಚಿಕಿತ್ಸೆ ಒದಗಿಸಲು ಬಳಸಲಾಗುತ್ತದೆ. ಕಾರ್ಯಕ್ರಮದ ಟಿಕೆಟ್‌ಗಳು ‘ಬುಕ್ ಮೈ ಶೋ’ದಲ್ಲಿ ಲಭ್ಯ.
****
ಸ್ವರ ಉತ್ಸವ
ಬೆಂಗಳೂರು: ಸಪ್ತಕ ಬೆಂಗಳೂರು ಹಾಗೂ ಪುಣೆಯ ಮಿತ್ರಾ ಫೌಂಡೇಷನ್ ಜಂಟಿಯಾಗಿ ಇದೇ 15ರಂದು ಸಂಜೆ 5 ಗಂಟೆಗೆ ಭಾರತೀಯ ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ ‘ಸ್ವರ ಉತ್ಸವ’ ಹಮ್ಮಿಕೊಂಡಿದೆ.
ಪುಣೆಯ ಸಂತೂರ್ ವಾದಕ ಶಶಾಂಕ ಗೋಖಲೆ ಅವರಿಂದ ಸಂತೂರ್ ವಾದನ ನಡೆಯಲಿದೆ. ಸಂಜೀವ್ ಅಭ್ಯಂಕರ್ ಅವರಿಂದ ಗಾಯನ ನಡೆಯಲಿದ್ದು, ತಬಲಾದಲ್ಲಿ ಅಜಿಂಕ್ಯಾ ಜೋಶಿ, ಹಾರ್ಮೋನಿಯಂನಲ್ಲಿ ವ್ಯಾಸಮೂರ್ತಿ ಕಟ್ಟಿ ಸಾಥ್ ನೀಡಲಿದ್ದಾರೆ. ಪ್ರವೇಶ ಉಚಿತ ಇರಲಿದೆ.
****
ಶಿವರಾತ್ರಿ ಸಂಗೀತ–ನೃತ್ಯ ಉತ್ಸವ
ಬೆಂಗಳೂರು: ಶೃಂಗೇರಿ ಶಂಕರಮಠ, ಸೃಷ್ಟಿ ಕೇಂದ್ರ ಮತ್ತು ರೋಟರಿ ಡಿಸ್ಟ್ರಿಕ್ಟ್ 3191 ಜಂಟಿಯಾಗಿ ಇದೇ 15ರಂದು ಸಂಜೆ 6 ಗಂಟೆಯಿಂದ ಶಂಕರಪುರದ ಶೃಂಗೇರಿ ಮಠದಲ್ಲಿ ಅಹೋರಾತ್ರಿ ಶಿವರಾತ್ರಿ ಸಂಗೀತ–ನೃತ್ಯ ಉತ್ಸವ ಹಮ್ಮಿಕೊಂಡಿದೆ.
ರಾಜ ಅವರಿಂದ ವೃಂದ ನಾದಸ್ವರ, ಆರ್.ಕೆ. ಪದ್ಮನಾಭ, ನಾಗಮಣಿ ಶ್ರೀನಾಥ್, ಸುಮಾ ಸುಧೀಂದ್ರ, ವೇಣುಗೋಪಾಲ್, ಶಿವಶ್ರೀ ಸ್ಕಂದಪ್ರಸಾದ್ ಅವರಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ.
ಸೃಷ್ಟಿ ಕೇಂದ್ರ, ಶಿವಪ್ರಿಯ ನೃತ್ಯ ಶಾಲೆಯಿಂದ ನೃತ್ಯ ನಾಟಕ, ಸೌಮ್ಯ ಅವರಿಂದ ಒಡಿಸ್ಸಿ ನೃತ್ಯ, ನಾಟ್ಯತರಂಗ್ ತಂಡದಿಂದ ಕಥಕ್, ಮಧುರಾ ಮುಖರ್ಜಿ, ಮನೋಜ, ಐಶ್ವರ್ಯಾ ನಿತ್ಯಾನಂದ, ಸೃಷ್ಟಿ, ಅಕ್ಷತಾ ಮತ್ತು ಎ.ವಿ. ಸತ್ಯನಾರಾಯಣ ಅವರಿಂದ ಭರತನಾಟ್ಯ ಹಮ್ಮಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.